HEALTH 4 U HOME REMEDY

ಫ್ಯಾಟಿ ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಫುಡ್ಸ್

ಫ್ಯಾಟಿ ಲಿವರ್ ಸಮಸ್ಯೆ ಇರುವವರು ತಿನ್ನಬೇಕಾದ ಹಾಗು ತಿನ್ನಬಾರದ ಆಹಾರಗಳು.

ಫ್ಯಾಟಿ ಲಿವರ್ ಗೆ ಮಧ್ಯಪಾನ ಬಲು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ ಹಾಗಾಗಿ ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುವವರು ಮಧ್ಯ ಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದೇ ಉತ್ತಮ. ಅದು ಮಧ್ಯಪಾನವಾಗಲಿ ಅಥವಾ ಬಿಯರ್.  ಲಿವರ್ ಅಂದರೆ ಯಕೃತ್ನ ಅರೋಗ್ಯ ವು ಚೆನ್ನಾಗಿದ್ದರೆ ನಮ್ಮ ದೇಹದ ಆರೋಗ್ಯವು ಚೆನ್ನಾಗಿದೆ ಎಂದರ್ಥ. ನಮ್ಮ ದೇಹದಲ್ಲಿರುವ ಪಿತ್ತಜನಕಾಂಗ ಮತ್ತು ಉತ್ಪತ್ತಿಯಾಗುವ ಅನಗತ್ಯವಾದ ಕಲ್ಮಶಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ ಆದರೆ ಇಂದಿನ ಜನರ ಜೀವನ ಶೈಲಿ ಜಡತ್ವ ಶೇಖರಿಸಿದ ಆಹಾರ ಸೇವನೆ, ಫಾಸ್ಟ್ ಫುಡ್ ನ ಗೀಳು ಅತಿಯಾದ ಮಧ್ಯ ಸೇವನೆ ಈ ಎಲ್ಲಾ ಆಹಾರ ಕ್ರಮಗಳಿಂದ ಬಹಳಷ್ಟು ಜನರಲ್ಲಿ ಈ ಫ್ಯಾಟಿ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹಾಗಾದರೆ ಫ್ಯಾಟಿ ಲಿವರ್  ನ ಸಮಸ್ಯೆ ಇಂದ ಹೊರ ಬರುವುದು ಹೇಗೆ ?

ಈ ಮೊದಲೇ ಹೇಳಿದಂತೆ ಫ್ಯಾಟಿ ಲಿವರ್  ಸಮಸ್ಯೆ ಮಧ್ಯ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ಫ್ಯಾಟಿ ಲಿವರ್ ಲೀವರ್  ಸಮಸ್ಯೆಯನ್ನು ದೂರವಿಡಬಹುದು.ಒಂದು ವೇಳೆ ನೀವು ಮದ್ಯ ವ್ಯಸನಿಗಳಾಗಿರದ ಪಕ್ಷದಲ್ಲಿ ನಿಮ್ಮಲ್ಲಿ ಈ ಸಮಸ್ಯೆ ಕಂಡು ಬಂದರೆ ನಿಮ್ಮ ಜೀವನ ಶೈಲಿ ನಿಮ್ಮ ಆಹಾರದ ಕ್ರಮ, ಬೊಜ್ಜು ಇಳಿಸುವುದು, ದೇಹದಲ್ಲಿರುವ ಕೊಬ್ಬಿನಂಶವನ್ನು ಕಡಿತ ಗೊಳಿಸುವುದು ನಿಯಮಿತ ನೀರು ಸೇವನೆ ಹಾಗು ವ್ಯಾಯಾಮ ಅತ್ಯಗತ್ಯ.

ಅಮೆರಿಕಾದ ಸಂಸ್ಥೆಯೊಂದು ಫ್ಯಾಟಿ ಲಿವರ್ಗೆ ಯಾವುದೇ ಔಷದಿ ಇಲ್ಲ ಎಂದು ಹೇಳಿದರೂ ಫ್ಯಾಟಿ ಲಿವರ್ ನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿದರೆ ಅದನ್ನು ರಿವರ್ಸ್ ಮಾಡಲು ಸಾಧ್ಯವೆಂದು ಬಲ್ಲವರ ಅಭಿಪ್ರಾಯ.

ಹಾಗಿದ್ದರೆ ನಾವು ತಿನ್ನಬೇಕಾದ ಪದಾರ್ಥಗಳು ಯಾವುವು?

ಎಲ್ಲಾ ವೈದ್ಯರುಗಳು ಸಹಜವಾಗಿ ಸಲಹೆ ನೀಡುವಂತೆ ಆರೋಗ್ಯಕ್ಕೆ ಉತ್ತಮವಾದ ನಾರಿನಂಶ ಇರುವ ಹಣ್ಣು ತರಕಾರಿಗಳು, ಆಂಟಿಓಕ್ಸಿಡೆಂಟ್ ಇರುವ ಪದಾರ್ಥಗಳು, ವಿಟಮಿನ್, ಮಿನರಲ್ ಹೆಚ್ಚು ಖನಿಜಾಂಶ ಗಳಿರುವ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದು. ಇವು ನಮ್ಮ ದೇಹದ ಯಕೃತ್ತನ್ನು ಆರೋಗ್ಯವಾಗಿಡಲು ಬಲು ಉಪಕಾರಿ.

ಹಸಿರೆಲೆ ತರಕಾರಿಗಳಾದ ಪಾಲಕ್ ,ಕಲೆ,ಮತ್ತು ಬ್ರೊಕೋಲಿ ಇವುಗಳು ಅತಿ ಹೆಚ್ಚಿನ ಮೊತ್ತದ ಆಂಟಿಓಕ್ಸಿಡೆಂಟ್ ಹೊಂದಿರುವ ತರಕಾರಿಗಳಾಗಿವೆ. ಪಾಲಕ್ ನಲ್ಲಿರುವ ನೈಟ್ರೇಟ್ ಮತ್ತು ಪಾಲಿಫೆನಾಲ್ ಅಂಶಗಳು ಫ್ಯಾಟಿ ಲಿವರ್  ನ ಸಮಸ್ಯೆಯನ್ನು ದೂರ ಮಾಡಲು ಸಹಾಯಕಾರಿ.ಫ್ಯಾಟಿ ಲಿವರ್ ಸಮಸ್ಯೆಗೆ ಸಹಾಯವಾಗುವ ಇನ್ನು ಕೆಲವು ಹಣ್ಣುಗಳೆಂದರೆ ಬ್ಲೂ ಬೇರಿಸ್. ಇದರಲ್ಲಿ ಇಂಪ್ಲಾಮ್ಯಾಟಿವ್ ಅಂಶಗಳು ಹೇರಳವಾಗಿದೆ.

ಇನ್ನೊಂದು ಬಹಳ ಉತ್ತಮವಾದ ಆಹಾರವೆಂದರೆ ರಾಗಿ. ಇದರಲ್ಲಿರುವ ಬಹಳಷ್ಟು ಮೈಕ್ರೋನ್ಯೂಟ್ರಿಯೆಂಟ್ಸ್ ಗಳು ಫ್ಯಾಟಿ ಲಿವರ್ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡುತ್ತವೆ. ಇದು ನಮ್ಮ ದೇಹದಲ್ಲಿರುವ ಕೊಬ್ಬಿನಂಶವನ್ನು ಕಡಿತ ಗೊಳಿಸಿ ಕೊಬ್ಬಿದ ಲಿವರ್ ಸಮಸ್ಯೆಯನ್ನು ಗುಣ ಪಡಿಸುತದೆ.

ಓಟ್ಸ್ ನಲ್ಲಿ ಹೇರಳ ಮೊತ್ತದ ನಾರಿನಂಶವಿದ್ದು ಇದು ಫ್ಯಾಟಿ ಲಿವರ್ ನ್ನು ಕಡಿತಗೊಳಿಸಲು ಸಹಕರಿಸುತ್ತದೆ. ಇನ್ನು ಕೆಲವು ಅತೀ ಹೆಚ್ಚು ನಾರಿನಂಶವಿರುವ ಆಹಾರಗಳೆಂದರೆ ಬ್ರೌನ್ ರೈಸ್  ವೀಟ್ ಬ್ರೆಡ್.

ಇನ್ನು ನಮ್ಮ ದೇಹದಲ್ಲಿ ಕೊಬ್ಬಿನಂಶ ಕಡಿತಗೊಳಿಸಿದಷ್ಟೇ ಒಳ್ಳೆಯ ಕೊಬ್ಬಿನ ಅವಶ್ಯಕತೆಯೂ ಇದೆ . ಒಳ್ಳೆಯ ಕೊಬ್ಬನ್ನು ಹೆಚ್ಚಿಸಲು ಅವಕ್ಯಾಡೊ ಅಥವಾ ಬಟರ್ ಫ್ರೂಟ್,  ಆಲಿವ್ ಆಯಿಲ್, ಬಾದಾಮಿ ಹಾಗು ವಾಲ್ ನಟ್ಸ್ ಇವುಗಳು ದೇಹಕ್ಕೆ ಬೇಕಾದ ಆರೋಗ್ಯಕರ ಕೊಬ್ಬು ಹಾಗು ವಿಟಮಿನ್ ಇ ಅಂಶವನ್ನು ಪೂರೈಸುತ್ತದೆ.

ರಾಜ್ಮಾ ಕಾಳುಗಳನ್ನು ಬಳಸುವುದಾದರೆ ಅದರಿಂದ ಬೇಕಾದಷ್ಟು ಪ್ರೊಟೀನ್ ಹಾಗು ನಾರಿನಂಶ ಅಧಿಕವಾಗಿದ್ದು ಅದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಕಡಿಮೆ ಪ್ರಮಾಣದಲ್ಲಿದೆ.ಇದು ಸಕ್ಕರೆ ಕಾಯಿಲೆಯಿಂದ ಬಳಲುವವರು ಬಳಸೋದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಹಾಗೆಯೇ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ಫ್ಯಾಟಿ ಲಿವರ್ ನಿಂದ ಉಂಟಾಗುವ ಸಮಸ್ಯೆಯನ್ನು ಕಡಿತಗೊಳಿಸಬಹುದು.

ಮೇಲೆ ಹೇಳಿದ ಆಹಾರಗಳೊಂದೊಗೆ ಇನ್ನಷ್ಟು ಆಹಾರಗಳೆಂದರೆ ಒಮೇಗಾ 3 ಇರುವ ಮೀನು .ಸ್ಕಿನ್ ಔಟ್ ಚಿಕನ್, ಬೀನ್ಸ್ ಮತ್ತು ಬೇಳೆಗಳು, ಹರಸಿಣ ಹುಡಿ,  ಬೆಳ್ಳುಳ್ಳಿ, ಗ್ರೀನ್ ಟೀ, ಗ್ರೀಕ್ ಯೋಗರ್ಟ್.ಕಡಿಮೆ ಕೊಬ್ಬಿನಾಂಶವಿರುವ ಹಾಲನ್ನು ದಿನ ನಿತ್ಯದ ಆಹಾರ ಕ್ರಮದಲ್ಲಿ ಉಪಯೋಗಿಸುವುದು ಬಹಳ ಪ್ರಯೋಗಕಾರಿ.

ಇದರೊಂದಿಗೆ ಕೆಲವು ಆಹಾರಗಳನ್ನು ಸಂಪೂರ್ಣವಾಗಿ ತೊರೆದು ಬಿಡುವುದು :

ಸಕ್ಕರೆ, ಶೇಖರಣೆ ಗೊಳಿಸಿದ ತಂಪು ಪಾನೀಯಗಳು, ಮೊದಲೇ ಹೇಳಿದಂತೆ ಮದ್ಯ ಸೇವನೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಪಿಜ್ಜಾ, ವೈಟ್ ಬ್ರೆಡ್,ಪಾಸ್ತಾ, ಇವುಗಳ ಸೇವನೆ ಖಡಾ ಖಂಡಿತವಾಗಿ ನಿಲ್ಲಿಸಿಬಿಡುವುದು ನಿಮ್ಮ ಪ್ಯಾಟಿ ಲಿವರ್ ಸಮಸ್ಯೆಗೆ ಉತ್ತಮ ಸಲಹೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X