ಪ್ಯಾರಿಸ್ : ಆಗಸ್ಟ್ 28 ರಂದು ಫ್ರಾನ್ಸ್ ರಾಜಧಾನಿಯಲ್ಲಿ ಆರಂಭವಾಗಿದ್ದ 17 ನೇ ಆವೃತ್ತಿಯ ಪ್ಯಾರಾ ಒಲಿಂಪಿಕ್ಸ್ ಗೆ ಅದ್ದೂರಿ ತೆರೆ ಬಿದ್ದಿದೆ. 84 ಕ್ರೀಡಾ ಪಟುಗಳನ್ನ ಒಳಗೊಂಡ ಭಾರತ ತಂಡವು ಒಲಿಂಪಿಕ್ಸ್ ನಲ್ಲಿ 29 ಪದಕಗಳನ್ನ ಪಡೆಯುವ ಮೂಲಕ ಇತಿಹಾಸವನ್ನು ರಚಿಸಿದೆ. ಈ ಮೂಲಕ ಭಾರತದ ಪ್ಯಾರಾ ಅಥ್ಲೀಟ್ ಗಳು ಯುವ ಕ್ರೀಡಾಳುಗಳಿಗೆ ಸ್ಪೂರ್ತಿಯಾಗಿ ಹೊರಹೊಮ್ಮಿದ್ದಾರೆ.
ಪ್ಯಾರಿಸ್ ಗೇಮ್ಸ್ ನಲ್ಲಿ 7 ಚಿನ್ನ, 9 ಬೆಳ್ಳಿ ಹಾಗು 13 ಕಂಚು ಸೇರಿ ಒಟ್ಟಾರೆ 29 ಪದಕಗಳು ಲಭಿಸಿವೆ. 2020 ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ 19 ಪದಕಗಳನ್ನ ತಮ್ಮದಾಗಿಸಿಕೊಂಡಿತ್ತು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ತಮ್ಮ ಪ್ರದರ್ಶನ ವನ್ನು ಉತ್ತಮ ಗೊಳಿಸಿದ್ದಾರೆ. 219 ಪದಕಗಳನ್ನು ಮುಡಿಗೇರಿಸಿದ ಚೀನಾ ಮೊದಲ ಸ್ಥಾನವನ್ನು ಕಾಯ್ದು ಕೊಂಡಿದೆ.
ಚಿನ್ನದ ಪದಕ ಪಡೆದ ಕಣ್ಮಣಿಗಳು:
ಅವನಿ ಲೇಖರ – ಶೂಟಿಂಗ್
ನಿತೇಶ್ ಕುಮಾರ್ – ಬ್ಯಾಡ್ಮಿಂಟನ್
ಸುಮಿತ್ ಅಂತಿಲ್ – ಜಾವಲಿನ್ ಥ್ರೋ
ಹರ್ವಿಂದರ್ ಸಿಂಗ್ – ಆರ್ಚರಿ
ಧರಂಬೀರ್ ಸಿಂಗ್ – ಕ್ಲಬ್ ಥ್ರೋ
ಪ್ರವೀಣ್ ಕುಮಾರ್ – ಹೈ ಜಂಪ್
ನವ್ ದೀಪ್ ಸಿಂಗ್ – ಜಾವಲಿನ್ ಥ್ರೋ
ಬೆಳ್ಳಿ ಪಡೆದ ಸಾಧಕರು
ಮನೀಶ್ – ಶೂಟಿಂಗ್
ನಿಶಾದ್ – ಹೈ ಜಂಪ್
ಯೋಗೇಶ್ – ಡಿಸ್ಕಸ್ ಥ್ರೋ
ತುಳಸಿಮತಿ – ಬ್ಯಾಡ್ಮಿಂಟನ್
ಸುಹಾಸ್ – ಬ್ಯಾಡ್ಮಿಂಟನ್
ಅಜೀತ್ – ಜಾವಲಿನ್ ಥ್ರೋ
ಶರದ್ – ಹೈ ಜಂಪ್
ಸಚಿನ್ – ಶಾಟ್ ಪುಟ್
ಪ್ರಣವ್ – ಕ್ಲಬ್ ಥ್ರೋ
ಕಂಚು ಗೆದ್ದವರು
ಮೋನಾ – ಶೂಟಿಂಗ್
ಪ್ರೀತಿ ಪಾಲ್ – 100 ಮೀಟರ್ಸ್ ಓಟ
ರುಬೀನಾ – ಶೂಟಿಂಗ್
ಪ್ರೀತಿ ಪಾಲ್ – 200 ಮೀಟರ್ಸ್ ಓಟ
ಶೀತಲ್ -ರಾಕೇಶ್ -ಆರ್ಚರಿ
ನಿತ್ಯ – ಬ್ಯಾಡ್ಮಿಂಟನ್
ದೀಪ್ತಿ – 400 ಮೀಟರ್ಸ್ ಓಟ
ಮನಿಷಾ – ಬ್ಯಾಡ್ಮಿಂಟನ್
ತಂಗವೇಲು – ಹೈ ಜಂಪ್
ಸುಂದರ್ – ಜಾವಲಿನ್ ಥ್ರೋ
ಕಪಿಲ್ – ಜುಡೋ
ಹೊಕಟೋ – ಶಾಟ್ ಪುಟ್
ಸಿಮ್ರಾನ್ – 200 ಮೀಟರ್ಸ್ ಓಟ
ಇಲ್ಲಿಯ ವರೆಗೆ ಒಟ್ಟು 12 ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತ ತಂಡವು ಗೆದ್ದ ಒಟ್ಟು ಪದಕಗಳು 31. ಆದರೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬರೋಬ್ಬರಿ 29 ಪದಕಗಳನ್ನು ಗೆದ್ದು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ.
ಚೀನಾ 93 ಚಿನ್ನ, 73 ಬೆಳ್ಳಿ, 49 ಕಂಚಿನ ಪದಕಗಳೊಂದಿಗೆ ಮೊದಲನೇ ಸ್ಥಾನದಲ್ಲಿದೆ. ಗ್ರೇಟ್ ಬ್ರಿಟನ್, 47 ಚಿನ್ನ, 41 ಬೆಳ್ಳಿ, 31 ಕಂಚು ಗೆದ್ದು ಎರಡನೇ ಸ್ಥಾನದಲ್ಲಿದರೆ, ಅಮೆರಿಕಾ 35 ಚಿನ್ನ, 41 ಬೆಳ್ಳಿ, 25 ಕಂಚಿನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಭಾರತ ಕೇಂದ್ರ ಸರ್ಕಾರವು ಒಲಿಂಪಿಕ್ಸ್‌ಗೆ ವ್ಯಯಿಸಿದ ಶೇಕಡಾ 5-10 ರಷ್ಟು ವೆಚ್ಚವನ್ನು ಪ್ಯಾರಾಲಿಂಪಿಕ್ಸ್‌ಗೆ ಖರ್ಚು ಮಾಡಿಲ್ಲ. ಉದಾಹರಣೆಗೆ, ಒಲಿಂಪಿಕ್ಸ್‌ನ ಬಜೆಟ್ 500 ಕೋಟಿ ರೂ. ಆಗಿದ್ದರೆ, ಪ್ಯಾರಾಲಿಂಪಿಕ್ಸ್‌ನ ಬಜೆಟ್ 30 ಕೋಟಿ ಆದರೂ, ಭಾರತದ ಪ್ಯಾರಾ ಅಥ್ಲೀಟ್‌ಗಳು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ.
ಮುಂದಿನ ಪ್ಯಾರಾ ಒಲಿಂಪಿಕ್ಸ್ 2024 ರಲ್ಲಿ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆಯಲಿದೆ. ಮುಂಬರುವ ಒಲಂಪಿಕ್ನಲ್ಲಿ ಜಯಗಳಿಸಲು ಮತ್ತು ಇನ್ನಷ್ಟು ಪದಕಗಳನ್ನು ಗೆದ್ದು ಭಾರತವನ್ನು ಮೊದಲ ಸ್ಥಾನಕ್ಕೆ ತರಲು ಶುಭ ಹಾರೈಸುವ ಭಾರತೀಯರು.
Leave feedback about this