ಆ ಒಂದು ಸನ್ನೆಯಿಂದ ದರ್ಶನ ಗೆ ಸಿಗುತ್ತಾ ಜಾಮೀನು ? – ಪಶ್ಚತ್ತಾಪದ ಗಂದಯೂ ಕಾಣಿಸ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ದರ್ಶನ ಗೆ ನೀಡಲಾಗುತ್ತಿದೆ ಅನ್ನೋ ರಾಜ ಮರ್ಯಾದೆ ಹಾಗೂ ಸೌಕರ್ಯಗಳು ಅವನ ಜಾಮೀನು ಕೈ ತಪ್ಪಲು ಮೊದಲ ಕಾರಣ ಆಗಬಹುದೇ ?
ಜೈಲಿನಲ್ಲಿ ಕುಳಿತು ಕೈಯಲ್ಲಿ ಸಿಗರೇಟ್, ಟೀ ಕಪ್, ಹಾಗೂ ರೌಡಿಶೀಟರ್ ಜೊತೆ ಕುಳಿತಿರುವ ಬಗ್ಗೆ ಪೊಲೀಸರು ಈಗಾಗಲೇ ಪೊಲೀಸರಿಗೆ ತಿಳಿಸಲಿದ್ದಾರೆ. ದರ್ಶನ್ಗೆ ಎಷ್ಟು ಪ್ರಭಾವ ಇದೆ ಎಂಬುದನ್ನು ಕೋರ್ಟ್ಗೆ ಮನದಟ್ಟು ಮಾಡಿಕೊಳ್ಳಲು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಸಹಾಯಾವಾಗಲಿದೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಬಂಧನಕ್ಕೊಳಗಾಗಿ ಬರೋಬ್ಬರಿ ಮೂರು ತಿಂಗಳು ಕಳೆದಿವೆ. ಇದುವರೆಗೂ ಅವರ ಪರ ವಕೀರಾಳರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ.
ಒಂದೊಮ್ಮೆ ಅರ್ಜಿ ಸಲ್ಲಿಸಿದರೂ ಅಷ್ಟು ಸುಲಭದಲ್ಲಿ ಜಾಮೀನು ಸಿಗದು ಎಂಬ ಅಭಿಪ್ರಾಯ ಇದೆ. ಇದಕ್ಕೆ ಕಾರಣ ನಟ ದರ್ಶನ್ ಅವರ ಉದ್ದಟತನದ ಎಡವಟ್ಟುಗಳು. ದರ್ಶನ್ ರವರ ಜಮೀನಿಗೆ ತಡೆ ತರಲು ಪೊಲೀಸರಿಗೆ ದಿನಕ್ಕೊಂದು ಅಸ್ತ್ರಗಳು ದರ್ಶನ್ ರವರೆ ಒದಗಿಸುತ್ತಿರುವುದು ಎದ್ದು ಕಾಣುತ್ತಿದೆ.
ಈ ಸಮಸ್ಯೆಗಳನ್ನು ಸ್ವತಃ ದರ್ಶನ್ ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ.ನಟ ದರ್ಶನ್ ಜೈಲಿನಿಂದಲೇ ರೌಡಿ ಶೀಟರ್ ಒಬ್ಬರ ಮಗನಿಗೆ ವಿಡಿಯೋ ಕಾಲ್ ಮಾಡಿದ್ದರು. ಮತ್ತು ಈ ವಿಡಿಯೋ ಕಾಲ್ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು. ಈಗ ಈ ಅಂಶವನ್ನು ಪೋಲೀಸ್ ರು ಪ್ರಮುಖ ಅಂಶವಾಗಿ ಉಲ್ಲೇಖ ಮಾಡಲಿದ್ದಾರೆ. ಜೈಲಿನಲ್ಲಿದ್ದೆ ನಟ ದರ್ಶನ್ ರವರು ಫೋನ್ ನ ಬಳಕೆ ಮಾಡುತ್ತಾರೆ ಎಂದು ಪೋಲೀಸ್ ರು ನ್ಯಾಯಾಲಯಕ್ಕೆ ತಿಳಿಸಲಿದ್ದಾರೆ. ಇಷ್ಟೆಲ್ಲ ನಡೆದ ನಂತರ ದರ್ಶನ್ ರವರನ್ನು ಬಳ್ಳಾರಿ ಜೈಲಿಗೆ ರವಾನೆ ಮಾಡಲಾಗಿತ್ತು. ಆದರೆ ಅಲ್ಲಿಯೂ ಅವರಿಗೆ ಬುದ್ದಿ ಬಂದ ಹಾಗೆ ಕಾಣುತ್ತಿಲ್ಲ. ಅಲ್ಲಿಯೂ ಅಸಭ್ಯ ವರ್ತನೆ ತೋರುತ್ತಿದ್ದಾರೆ.
ಕ್ಯಾಮರಾ ಹಾಗು ಮಾಧ್ಯಮಗಳ ಮುಂದೆ ಮದ್ಯದ ಬೆರಳನ್ನು ತೋರಿಸಿ ಅಸಹ್ಯವಾಗಿ ನಡೆದು ಕೊಳ್ಳುತ್ತಿದ್ದಾರೆ. ಇನ್ನು ಇವರ ಕೆಲ ಫ್ಯಾನ್ ಗಳು ಇದನ್ನು ಸಮರ್ಥಿಸುವ ಪ್ರಯತ್ನ ಎಂದಿನಂತೆ ಮಾಡುತ್ತಿದ್ದಾರೆ. ಆದರೆ ಇದನ್ನೂ ಎಲ್ಲರೂ ಒಪ್ಪುತ್ತಿಲ್ಲ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಡಾರವಾಗಿರುವ ನಟ ದರ್ಶನ್ ಯಾವುದೇ ಪಶ್ಚಾತಾಪದ ಬದಲಾವಣೆಯನ್ನು ತೋರಿಸುತ್ತಿಲ್ಲ. ಈಗಾಗಲೇ ಸಾಕ್ಷ್ಯನಾಶಕ್ಕೂ ಬಹಳ ಪ್ರಯತ್ನ ನಡೆದಿದೆ ಜಮೀನಿನ ಮೇಲೆ ಹೊರಗೆ ಬಂದರೆ ದೊಡ್ಡವರ ಪ್ರಬಾವ ಬಳಸಿ ಮತ್ತಷ್ಟು ಸಾಕ್ಷ್ಯ ನಾಶ ಮಾಡುವ ಸಂಭವ ಇದೆ. ರೌಡಿ ಶೀಟರ್ಗಳಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಪೊಲೀಸರು ಆಕ್ಷೇಪಣೆ ಸಲ್ಲಿಸೋ ಸಾಧ್ಯತೆ ಇದೆ.
Leave feedback about this