ದಟ್ಟವಾದ ಮೃದುವಾದ ಕಾಂತಿಯುತ ಕಪ್ಪು ಕೂದಲನ್ನು ಹೊಂದಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಬೇರೆ ಬೇರೆ ರೀತಿಯ ಎಣ್ಣೆಯನ್ನು ಹುಡುಕಿದರೆ, ಮತ್ತೆ ಕೆಲವರು ಸಿಕ್ಕಿ ಸಿಕ್ಕಿದ ಹೇರ್ ಮಾಸ್ಕ್ ಬಳಸುತ್ತಾರೆ. ಆದರೆ ಇವಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿವಾಗುವುದೂ ಇಲ್ಲಿ ನಾವು ಸುಲಭ ಪರಿಹಾರವನ್ನು ಹೇಳುತ್ತಿದ್ದೇವೆ. ಆ ಪರಿಹಾರವೇ ಪೇರಳೆ ಎಲೆಗಳು.
ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
ಆಕರ್ಷಕ ಕೂದಲು ಮೃದುವಾದ ಮತ್ತು ಆರೋಗ್ಯಕರ ಕೂದಲು ಒಬ್ಬರ ದೇಹಕ್ಕೆ ಹೆಚ್ಚುವರಿ ಸೊಬಗು ನೀಡುತ್ತದೆ. ನೈಸರ್ಗಿಕವಾಗಿ ಸುಂದರವಾದ ಕೂದಲು ಹೇಗಿರಬೇಕು ಎಂಬುದನ್ನು ತಿಳಿಯೋಣ:
ಪೇರಳೆ ಎಲೆಗಳಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಜೀವಸತ್ವ, ಖನಿಜ ಅಂಶಗಳು ಮತ್ತು ಫೈಬರ್ ಅನ್ನು ಹೊಂದಿವೆ. ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಕೂದಲಿಗೆ ಪೇರಳೆ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು.
ಪೇರಳೆ ಮರದ ಎಲೆಗಳ ಹೇರ್ ಪ್ಯಾಕ್ ಮಾಡಲು ಸುಮಾರು 20 ರಿಂದ 25 ಎಲೆಗಳನ್ನು ತೊಳೆದು ನೀರು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ, ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ 30-40 ನಿಮಿಷಗಳ ಕಾಲ ಹಾಗೆ ಬಿಟ್ಟು ಒಣಗಿದ ಮೇಲೆ ಕೂದಲನ್ನು ತೊಳೆಯಿರಿ.
ಇದಲ್ಲದೆ ತಯಾರಿಸಿದ ಪೇಸ್ಟ್ ಗೆ ಒಂದಿಷ್ಟು ತೆಂಗಿನ ಎಣ್ಣೆಯನ್ನು ಸೇರಿಸುವುದರಿಂದ ನಿಮಗೆ ಹೆಚ್ಚಿನ ಫಲಿತಾಂಶ ಸಿಗುವುದು.
ಕೆಲವು ಪೇರಳೆ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆದು, ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ. 15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ, ಆ ನೀರನ್ನು ತಣ್ಣಗಾಗಿಸಿ. ಅದು ತಣ್ಣಗಾದ ನಂತರ, ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ. ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬುಡಗಳಿಗೆ ಈ ನೀರನ್ನು ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ ೩೦ ನಿಮಿಷಗಳ ನಂತರ ತೊಳೆಯುದರಿಂದ ಒಳ್ಳೆಯ ಫಲಿತಾಂಶ ಸಿಗುವುದು.