ಮದುವೆ ಸಮಾರಂಭಗಳಲ್ಲಿ ಅಥವಾ ಇನ್ನಿತರೇ ಯಾವುದೇ ಹಬ್ಬಗಳಲ್ಲಿ ಗ್ರಾಂಡ್ ಆದ ಸೀರೆಗಳನ್ನು ಹಾಕುವುದು ಎಲ್ಲರಿಗು ಇಷ್ಟ ಆದರೆ ಕೆಲವೇ ಕೆಲ ಮಹಿಳೆಯರು ಸಿಂಪಲ್ ಕಲರ್ ಹಾಗು ಸಿಂಪಲ್ ಸಾರಿ ಹಾಕಲು ಇಷ್ಟ ಪಡುವುದೂ ಉಂಟು. ಹಾಗಂತ ಸಿಕ್ಕಿದ ಸೀರೆ ಹಾಗು ಬ್ಲೌಸ್ ಹಾಕಿಕೊಂಡು ಹೋಗುವುದು ಉತ್ತಮ ಯೋಚನೆ ಅಲ್ಲ. ಅಂಥವರಿಗೆ ಸ್ವಲ್ಪ ಮಟ್ಟಿನ ಡಿಸೈನ್ ಬ್ಲೌಸ್ ನಲ್ಲಿ ಹೊಂದಿಸಿ ಹೊಲಿದರೆ ಲೇಟೆಸ್ಟ್ ಆಗಿ ಸಿಂಪಲ್ ಆದರೂ ಸುಂದರವಾಗಿ ಕಾಣಲು ಈ ಹಳದಿ ಬಣ್ಣದ ಬ್ಲೌಸ್ ಐಡಿಯಾ ಸೂಕ್ತ. ಈ ಹಳದಿ ಬಣ್ಣದ ಬ್ಲೌಸ್ ನೈಸರ್ಗಿಕ ಸೊಬಗು ಮತ್ತು ಆಧುನಿಕ ಶೈಲಿಯ ಸಂಯೋಜನೆಯಾಗಿದೆ. ಈ ಬ್ಲೌಸ್‌ನ ವಿಶೇಷತೆಯಾದ (tying bow) ಡಿಸೈನ್ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ ವಿಶೇಷತೆಯಾದ (tying bow) ಡಿಸೈನ್ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
ಗುಲಾಬಿ ಕೇಸರಿ ಹಾಗೂ ಪೀಚ್ ಕಾಂಬಿನೇಶನ್ ಇರುವ ಈ ಬ್ಲೌಸ್ ಬಟ್ಟೆಯಲ್ಲೇ ಹೊಲಿದ ಸಣ್ಣ ಸಣ್ಣ ಬೀಡ್ ಗಳನ್ನೂ ಹೊಂದಿಕೊಂಡು ಈ ಬಣ್ಣ ಹಾಗೂ ವಿ ಶೇಪ್ ಕೊಡುವ ಬ್ಲೌಸ್ ನಿಮ್ಮಲ್ಲಿ ಇರುವ ಮಲ್ಟಿಕಲರ್ ಸೀರೆಗೆ ಖಂಡಿತ ಒಪ್ಪುವಂತಿದೆ.
ಇನ್ನು ಯಾರಿಗೆಲ್ಲಾ ಡಾರ್ಕ್ ಮರೂನ್ ಇಷ್ಟವೋ ಅವರಿಗೆ ಈ ಬ್ಲೌಸ್ ಹಾಗೂ ಡಿಸೈನ್ ತುಂಬಾ ಹೊಂದಿಕೊಳ್ಳುವಂತಿದೆ. ಬೆನ್ನ ಹಿಂದೆ ಕಟ್ಟುವ ಈ ಸಣ್ಣ ಗಂಟೆಯ ಆಕಾರದ ಡಿಸೈನ್ ಗಳು ಎಲ್ಲರಿಗೂ ಇಷ್ಟವಾಗುವಂತಿದೆ.
ಕಡಿಮೆ ಜನರಲ್ಲಿ ಕಾಣ ಸಿಗುವ ಈ ಲೈಟ್ ಪಿಂಕ್ ಬಣ್ಣ ಹಾಗೂ ಈ ಡಿಸೈನ್ ಲೇಟೆಸ್ಟ್ ಆಗಿದ್ದು ಸಿನಿಮಾ ತಾರೆಯರು ಉಡುವ ಬ್ಲೌಸ್ ಮಾದರಿಯಂತೆ ಹೊಲಿಯಲಾಗಿದೆ. ಒಳ್ಳೆಯ ಹಾಗೂ ಸಾದಾರಣ ಅಥವಾ ದಪ್ಪ ಮೈಕಟ್ಟು ಹೊಂದಿರುವವರಿಗೂ ಇದು ಒಪ್ಪುವಂತಿದೆ.
ಈ ಲೈಟ್ ಪಿಂಕ್ ಹಾಗೂ ಲೈಟ್ಬ ಪರ್ಪಲ್ ಬಣ್ಣ ಹೊಂದಿರುವ ಈ ಡಿಸೈನ್ ಲೇಟೆಸ್ಟ್ ಆಗಿದ್ದು ಸುಮಾರು 18 ರಿಂದ 25 ವಯಸ್ಸಿನ ಯುವತಿಯರಿಗೆ ಕಾಲೇಜು ಕಾರ್ಯಕ್ರಮಗಳಿಗೆ ಈ ಬ್ಲೌಸ್ ಹೊಲಿಯಲಾಗಿದೆ. ಒಳ್ಳೆಯ ಹಾಗೂ ಸಾದಾರಣ ಅಥವಾ ದಪ್ಪ ಮೈಕಟ್ಟು ಹೊಂದಿರುವವರಿಗೂ ಇದು ಒಪ್ಪುವಂತಿದೆ.
ಕೆಂಪು ಹಾಗೂ ಮರೂನ್ ಮಿಶ್ರಿತ ಇರುವ ಈ ಬ್ಲೌಸ್ ಬಟ್ಟೆಯಲ್ಲೇ ಹೊಲಿದ ಹೊಲಿದ ಈ ಹೂವಿನ ಆಕೃತಿ ಹೊಂದಿಕೊಂಡು ಈ ಬಣ್ಣ ಹಾಗೂ ಸ್ಟಾರ್ ಶೇಪ್ ಕೊಡುವ ಬ್ಲೌಸ್ ನಿಮ್ಮಲ್ಲಿ ಇರುವ ಕೆಂಪು ಮರೂನ್ ಹಾಗೂ ಕಪ್ಪು ಬಣ್ಣದ ಸೀರೆಗೆ ಹೊಂದುವಂತಿದೆ.
ಈ ಬ್ರೈಟ್ ಪಿಂಕ್ ಬಣ್ಣದ ಬ್ಲೌಸ್ ಹಾರ್ಟ್ ಶೇಪ್ ನ್ನು ಹೊಂದಿದ್ದು ಈ ಬ್ರೈಟ್ ಬಣ್ಣ ಮದುವೆ ಗ್ರಹ ಪ್ರವೇಶ ಇನ್ನಿತರ ಕಾರ್ಯಕ್ರಮಗಳಿಗೆ ಒಪ್ಪುವಂತಿದೆ.
ಈ ಲೈಟ್ ಸಿಲ್ವರ್ ಬಣ್ಣದ ಬ್ಲೌಸ್ ವೃತ್ತಾಕಾರದ ಶೇಪ್ ನ್ನು ಹೊಂದಿದ್ದು ಈ ಲೈಟ್ ಸಿಲ್ವರ್ ಬಣ್ಣ ಕಾಲೇಜು, ಪಾರ್ಟಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಒಪ್ಪುವಂತಿದೆ.
ಈ ಲೈಟ್ ಪಿಂಕ್ ಲೈಟ್ ಪರ್ಪಲ್ ಬಣ್ಣದ ಬ್ಲೌಸ್ ಪೂಜಾ ಕಾರ್ಯಕ್ರಮಗಳು ಗೃಹ ಪ್ರವೇಶ, ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಒಪ್ಪುವಂತಿದೆ. ಬಟ್ಟೆಯಲ್ಲೇ ಹೊಲಿದ ಮೊಗ್ಗಿನ ಆಕಾರದ ಡಿಸೈನ್ ನಿಮ್ಮ ಎಲ್ಲಾ ಗ್ರಾಂಡ್ ಸೀರೆಗಳಿಗೆ ಒಪ್ಪುವಂತಿದೆ.
ಇನ್ನು ಸಹಜವಾಗಿ ಸೀರೆ ಹೆಚ್ಚು ಉಡುವವರ ಬಳಿ ಇರುವ ಈ ಬಣ್ಣದ ಬ್ಲೌಸ್ ಗೋಲ್ಡ್ ಕಲರ್ ಬ್ಲೌಸ್, ಎಲ್ಲಾ ಗೋಲ್ಡ್ ಬಾರ್ಡರ್ ಇರುವ ಸೀರೆಗಳಿಗೆ ಮ್ಯಾಚ್ ಆಗುವಂತಿದೆ.
ಈ ಮೇಲೆ ತೋರಿಸಿದ ಬ್ಲೌಸ್ ಗಳಲ್ಲದೆ ಇನ್ನೂ ಬಹಳಷ್ಟು ಮಾಡ್ರನ್ ಡಿಸೈನ್ ಗಳಿರುವ ಬ್ಲೌಸ್ ಗಳನ್ನ ನಮ್ಮ ಅಂಕಣದಲ್ಲಿ ಪೋಸ್ಟ್ ಮಾಡಲಿದ್ದೇವೆ, ಬ್ಲೌಸ್ ಗಳಲ್ಲದೆ ಅದಕ್ಕೆ ಮ್ಯಾಚ್ ಆಗುವ ಇಯರ್ ರಿಂಗ್ಸ್, ಬ್ಯಾಂಗಲ್ಸ್ ಹಾಗೂ ಇನ್ನೂ ಮುಂತಾದ ಅಕ್ಸೆಸ್ಸ್ ಏರೀಸ್ ನನ್ನ ಪೋಸ್ಟ್ ಮಾಡಲಿದ್ದೇವೆ. ಈ ಅಂಕಣ ನಿಮಗೆ ಇಷ್ಟವಾದಲ್ಲಿ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ.
Leave feedback about this