MOTIVATIONAL REAL N REEL

ಜೀವನದಲ್ಲಿ ಗೆಲುವು ಸಾದಿಸಲು ಬೇಕಾಗಿರುವುದು ಕೇವಲ ದೊಡ್ಡ ದೊಡ್ಡ ಡೈಲಾಗು ಗಳಲ್ಲ……….

ಜೀವನದಲ್ಲಿ ಗೆಲುವು ಸಾದಿಸಲು ಬೇಕಾಗಿರುವುದು ಕೇವಲ ದೊಡ್ಡ ದೊಡ್ಡ ಡೈಲಾಗು ಗಳಲ್ಲ……….

ಬೇಕಾಗಿರೋದು ಧೃಡ ಸಂಕಲ್ಪ. ವರ್ತಮಾನದಲ್ಲಿ ನೀವು ಗೆದ್ದಿದ್ದೀರೋ ಅಥವಾ ಸೋತಿದ್ದಿರೋ ಅನ್ನೋದು ಇಂದಿನ ಸಂಕಲ್ಪಕ್ಕೆ ಯಾವುದೇ ಅಡೆ ತಡೆ ತರದು. ಅಡೆ ತಡೆ ಏನಾದ್ರು ಇದ್ರೆ ಅದು ನಿಮ್ಮ ಇಂದಿನ ಅಭ್ಯಾಸಗಳು. ಇಂದಿನ ನಿಮ್ಮ ಅಭ್ಯಾಸಗಳಿಂದಲೇ ಲೆಕ್ಕ ಹಾಕಬಹುದು ನೀವು ಗೆಲುವಿನ ಕಡೆಗೆ ಸಾಗುತಿದ್ದೀರಾ ಅಥವಾ ಸೋಲಿನ ಕಡೆಗೆ……” ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು”  ಈ ಮಾತಿನಂತೆ ನಮ್ಮಲ್ಲಿರುವ ನಿರಂತರ ಪರಿಶ್ರಮದ ಕೊರತೆ ನಮ್ಮನ್ನು ಗುರಿಯನ್ನು ತಲುಪಲು ತಡೆಯಾಗುವದು ಗ್ಯಾರಂಟಿ

ಪ್ರತೀ ವರ್ಷದ ಮೊದಲ ದಿನ ನಾವು ಬಹಳಷ್ಟು ಸಂಕಲ್ಪಗಳನ್ನು ಮಾಡಿರ್ತಿವಿ. ಆದರೆ ಅವುಗಳನ್ನು ಅಷ್ಟೇ ವೇಗವಾಗಿ ಮರೆತುಬಿಡ್ತಿವಿ.

ಇದಕ್ಕೆ ಕಾರಣ???????

ಕಾರಣ ಸಂಕಲ್ಪ ಹಾಗು ಗುರಿ ನಮ್ಮಲ್ಲಿ ನಿರ್ದಾರ ಆಗಿರುತ್ತೆ. ಆದರೆ ಗುರಿ ತಲುಪಲು ಒಂದು ನಿರ್ದೇಶನ ಅಥವಾ ಮಾದರಿ ಅಂತ ಇರಬೇಕಲ್ಲ್ವಾ ? ಒಂದು ಸಿಸ್ಟಮ್ ಬಳಸಬೇಕಲ್ಲ್ವಾ ?
ಗುರಿ ತಲುಪಲು ನಾವು ಬಳಸುವ ಸಿಸ್ಟಮ್ ನಾವು ಯಾವ ಕಡೆಗೆ ಸಾಗುತಿದ್ದೇವೆ ಎನ್ನುವುದನ್ನು ನಿರ್ಧರಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ಇದೊಂದು ವಿಚಾರ ಓದಿ.

ಉದಾಹರಣೆಗೆ : ನಮ್ಮಲ್ಲಿ ದುಡ್ಡೇನೋ ಬಹಳ ಇದೆ. ಇನ್ನು ದುಡ್ಡು ಸಂಪಾದಿಸಬೇಕು ಅನ್ನೋ ಗುರಿನು ಇದೆ. ಆದರೆ ನಮ್ಮಲ್ಲಿರೋ ದುಡ್ಡನ್ನು ಇತಿ ಮಿತಿಗಿಂತ ಜಾಸ್ತಿಯಾಗಿ ಪೋಲು ಮಾಡಿದರೆ ?  ಅಲ್ಲಿಗೆ ನಿನ್ನ ಗುರಿ ಹಾಗು ಸಂಕಲ್ಪವೇ ತಲೆ ಕೆಳಗಾಗುತ್ತದೆ. ಬದಲಾಗಿ ಇರೋ ದುಡ್ಡನ್ನು ಮಿತಿಯಾಗಿ ಬಳಸೋರು ನೀವಾಗಿದ್ದರೆ ನಿಮ್ಮ ಗುರಿ ಸಂಕಲ್ಪ ಹಾಗು ನಿರ್ದೇಶನ ಸರಿಯಾಗಿದೆ ಎಂದರ್ಥ. ಗುರಿ ತಲುಪುವುದು ಬೇಗ ಅಥವಾ ತಡವಾಗಬಹುದು ಆದರೆ ತಲುಪುವುದು ಅಂತೂ ಗ್ಯಾರಂಟಿ.

ಒಂದು ಉದಾಹರಣೆ ಓದಿ : ಹರ್ಯಾಣದ ಅಂಕಿತ್ ಬಯನಪುರಿಯ ಎಂಬ ಯುವಕ

ಕೇವಲ 75 ದಿನಗಳ ಫಿಟ್ನೆಸ್ ನಲ್ಲಿ ಒಂದು ಸಂಕಲ್ಪವನ್ನು ಹೊಂದಿ ತನ್ನಲ್ಲಿ ತಂದ ಬದಲಾವಣೆಯಿಂದ ವಿಶ್ವ ಪ್ರಖ್ಯಾತಿಯಾದ.  ಅಷ್ಟೇ ಅಲ್ಲ ನಮ್ಮ ಪ್ರಧಾನಿಯೊಂದಿಗೆ ಸ್ವಾಚ್ ಭಾರತ್ ಅಭಿಯಾನದಲ್ಲೂ ಭಾಗವಹಿಸಿ ಎಲ್ಲರಿಗು ಮಾದರಿಯಾದ.  ಅವನು ಯಾವುದೇ ಹೊಸ ಅವಿಷ್ಕಾರವಾಗಲಿ ಅದ್ಭುತವಾಗಲಿ ಮಾಡಿದ್ದಲ್ಲ. ಕೇವಲ ಹೊಂದಿದ್ದ ಸಂಕಲ್ಪವನ್ನು ಒಂದೇ ನಿರ್ದೇಶನದಲ್ಲಿ ಪೂರ್ತಿಗೊಳಿಸಿದ್ದು. ಅವನು ತಯಾರಿಸಿದ ವೇಳಾಪಟ್ಟಿಯನ್ನು ತಪ್ಪದೆ ಪಾಲಿಸಿದ್ದ್ದು ಅಷ್ಟೇ. ………

ವಿಶ್ವದ ಅತೀ ಹೆಗ್ಗಳಿಕೆಗೆ ಪಾತ್ರವಾದ ಒಂದು ಬ್ಯಾಸ್ಕೆಟ್ಬಾಲ್ ಟೀಮ್ ಒಂದಿದೆ. ಸ್ಯಾನ್ ಅಂಟೋನಿಯೋ ಸ್ಪುರ್ಸ್. ಈ ಟೀಮ್ ಬಳಸುವ ಲಾಕರ ಕೋಣೆಯಲ್ಲಿ ಜಾಕೋಬ್ ರೈಸ್ ಆವರು ಬರೆದ ಒಂದು ಫಲಕವಿತ್ತು. ಆ ಫಲಕದಲ್ಲಿ ಹೀಗೆ ಬರೆಯಲಾಗಿತ್ತು.,,,,,,,,,,

ಒಂದು ಬಂಡೆಯನ್ನು ಒಡೆಯಲು ಗಟ್ಟಿ ಮುಟ್ಟಾದ ಸುತ್ತಿಗೆಯಿಂದ ಬರೋಬ್ಬರಿ ನೂರು ಸಲ ಹೊಡೆಯಲಾಯಿತು. ಆದರೆ ಬಂಡೆ ಒಡೆಯಲೇ ಇಲ್ಲ. ಆದರೆ ನೂರಾ ಒಂದನೇ ಏಟಿಗೆ ಬಂಡೆ ಎರಡು ಹೋಳಾಯಿತು. ಹಾಗಿದ್ದರೆ ಆ ಬಂಡೆ ಒಡೆದದ್ದು ಆ ಕೊನೆಯ ಏಟಿನಿಂದ ಎನ್ನಬಹುದೇ????? ಖಂಡಿತ ಇಲ್ಲ.,,,,,ಸತತವಾಗಿ ಬಡಿದ ಎಲ್ಲಾ ಏಟುಗಳಿಂದ. ಸತತವಾಗಿ ಒಂದೇ ದಿಕ್ಕಿನಲ್ಲಿ ನಡೆಸುವ ಪ್ರಯತ್ನ ಖಂಡಿತವಾಗಿಯೂ ನಮ್ಮನ್ನು ಗುರಿಮುಟ್ಟಿಸಲು ಸಹಾಯ ಮಾಡುತ್ತೆ.

ಎರಡನೇ ಬಹುಮುಖ್ಯ ಸಂಕಲ್ಪ ಮತ್ತೆ ಹೇಳುವುದಾದರೆ,,,,, ಗುರಿ,,, ಸಂಕಲ್ಪ,, ಹಾಗು ನಡೆಸುವ ವಿಧಾನ. ಈ ಮೂರರಲ್ಲಿ ವಿಧಾನ ಬಹುಮುಖ್ಯ ಪಾತ್ರ ವಹಿಸುತ್ತದೆ. ಒಂದು ವೇಳೆ ನಿಮಗೆ ಗುರಿ ಹಾಗು ಆ ಸಂದರ್ಭದ ಪಲಿತಾಶವಷ್ಟೇ ಮುಖ್ಯ ಎನಿಸಿದರೆ, ನಿಮಗೆ ಫಲಿತಾಂಶ ಸಿಕ್ಕಿದ ಕೂಡಲೇ ನೀವು ಮತ್ತೆ ಆಲಸಿಗಳಾಗಿ ವಿಶ್ರಮಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ನೀವು ಒಂದು ದಿನಚರಿಯನ್ನು ಅನುಕರಿಸಿದರೆ ಒಂದರ ಬದಲಿಗೆ ಹಲವಾರು ಗುರಿಗಳನ್ನು ಸಾದಿಸಬಹುದು.

ಕ್ರಿಕೆಟ್ ಟೀಮ್ ಒಂದು ವರ್ಲ್ಡ್ ಕಪ್ ಗೆಲ್ಲಲು ಕೇವಲ ವರ್ಲ್ಡ್ ಕಪ್ ನ ಕನಸು ಕಾಣುವುದು ಅಥವಾ ಕೇವಲ ಸ್ಕೋರ್ ಬೋರ್ಡ್ ನೋಡೋದ್ರಿಂದ ಸಾಧ್ಯವಾಗದು. ಬದಲಾಗಿ ಪ್ರತಿದಿನ ಎಷ್ಟು ಹೊತ್ತು ಅಭ್ಯಾಸ ಅಗತ್ಯವಿದೆ ಅನ್ನೋ ಬಗ್ಗೆ ಯೋಚನೆ ತುಂಬಾ ಅಗತ್ಯ. ನಾವು ನಮ್ಮ ದಿನಚರಿಯಲ್ಲಿ ಸುಧಾರಣೆ ತಂದದ್ದೇ ಆದರೆ ಗುರಿ ತನ್ನಷ್ಟಕ್ಕೆ ತಾನೇ ತಲುಪುತ್ತದೆ.

ಮೂರನೇ ವಿಚಾರ ವಿಳಂಬ ಪ್ರವೃತ್ತಿ.

ಇವತ್ತು ಮಾಡಬೇಕಾದ ಕೆಲಸವನ್ನು ನಾಳೆ ಮಾಡೋಣ ಎಂಬ ಧೋರಣೆ. ಇಂದು ಮಾಡಬೇಕಿದ್ದ ಕೆಲಸವನ್ನು ನಾಳೆ ಮಾಡುವ ಎಂದು ತಳ್ಳಿ ಹಾಕುವ ಧೋರಣೆಗಳು ನಮ್ಮ ಗುರಿ ಹಾಗು ಸಂಕಲ್ಪವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಯಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತವೆ. ಸಣ್ಣ ಪುಟ್ಟ ಕೆಲಸಗಳನ್ನು ತಳ್ಳುವುದರಿಂದ ಅಂತ ದೊಡ್ಡ ನಷ್ಟವಾಗದು ಆದರೆ ಧೀರ್ಘ ಸಮಯದಲ್ಲಿ ತಳ್ಳಿ ಹಾಕಿದ ಕೆಲಸಗಳು ನಿಮಗೆ ರಾಕ್ಷಸನಂತೆ ಬೃಹದಾಕಾರವಾಗಿ ಬೆಳೆದು ನಿಲ್ಲುತ್ತವೆ.

ಉದಾಹರಣೆಗೆ ಒಂದು ತಟ್ಟೆಯಲ್ಲಿ ಮೊದಲ ದಿನ ಒಂದು ಅಕ್ಕಿ ಕಾಳು ಇಡಿ. ಎರಡನೆಯ ದಿನ ಎರಡು ಅಕ್ಕಿ ಕಾಳು ಹಾಗೆ ಮೂರನೇ ದಿನ ಮೂರು ಅಕ್ಕಿ ಕಾಳು. ಹೀಗೆ ಒಂದು ಐವತ್ತು ದಿನಗಳ ಕಾಲ ಮಾಡಿ ಐವತ್ತನೇ ದಿನ ಅಕ್ಕಿ ಕಾಳನ್ನು ಲೆಕ್ಕ ಹಾಕಲು ಪ್ರಯತ್ನಿಸಿ. ಕಷ್ಟ ಅಲ್ವೇ ? ಕೆಲಸವನ್ನು ಯಾವಾಗ ಪೂರ್ಣಗೊಳಿಸಬೇಕಿತ್ತು. ಅಸಲಿಗೆ ಯಾವಾಗ ಪೂರ್ಣಗೊಳಿಸಲಾಯಿತು ಇದು ಗೆಲುವಿನ ದಾರಿಗೆ ಖಂಡಿತ ಒಂದು ಅಡಚಣೆ.

ಯಾವ ಕೆಲಸಗಳು ನಮಗೆ ಕಷ್ಟ ಅನಿಸಿ ಇಷ್ಟ ಆಗೋದಿಲ್ವೋ ಅದೇ ಕೆಲಸಗಳು ನಮ್ಮನ್ನು ಗೆಲುವಿನ ಕಡೆಗೆ ಕರೆದೊಯ್ಯುತ್ತವೆ. ಉದಾಹರಣೆಗೆ: ಮೂರು ಗಂಟೆಯ ಒಂದು ಮೂವಿ ನೋಡ್ಲಿಕೆ ಎಲ್ಲರಿಗು ಇಷ್ಟ. ಆದರೆ ಒಂದು ಪುಸ್ತಕ ಓದಲು ಕೇವಲ ಒಂದು ಗಂಟೆಯೂ ನಮಗೆ ಟೂ ಮಚ್ ಅನ್ನಿಸಿಬಿಡುತ್ತೆ. ಯಾವುದು ನಮಗೆ ಮಜಾ ಕೊಡುತ್ತೋ ಅದೇ ಎಲರಿಗೂ ಇಷ್ಟ.

ವಿನ್ಸ್ಟೋನ್ ಚರ್ಚಿಲ್ ಹೇಳಿದಂತೆ “ನಮಗೆ ಆಗೋ ಇಷ್ಟ ಕಷ್ಟಗಳ ಹೊರತಾಗಿ ನಾವೇನಾದರೂ ಸಾಧಿಸಿದರೆ ಅದೇ ನಮ್ಮ ಗೆಲುವಿನ ದಾರಿ. ನಮ್ಮ ಮೇಲೇ ನಾವು ಕಟೋರವಾದಷ್ಟು ಒಳ್ಳೇದೇ ಹೊರತು. ನಮ್ಮ ಮೇಲೆ ನಾವು ತೋರಿಸುವ ಅನುಕಂಪವಲ್ಲ. “ಇದುವರೆಗೆ ಕಾಲಿಡದ ಜಾಗಕ್ಕೆ ನಾವು ತಲುಪುವ ಪ್ರಯತ್ನ ನಮ್ಮದಾದ್ರೆ ಅದು ನಮ್ಮ ಗುರಿ ತಲುಪುವ ಮೊದಲ ಹೆಜ್ಜೆ” ಎನ್ನಬಹುದು. ಗುಂಪಿನಲ್ಲಿ ನಿಂತು ಪ್ರತಿಯೊಬ್ಬರು ಕೂಗಬಹುದು ಆದರೆ ಗುಂಪಿನಿಂದ ಹೊರಗೆ ನಿಂತು ಕೂಗಾಡಿ, ಅದು ನಿಮ್ಮ ದಿಟ್ಟತನವನ್ನು ತೋರಿಸುತ್ತೆ.

ಇಲ್ಲಿ ಹೇಳುವುದಿಷ್ಟೇ ಕೇವಲ ಮೂರು ತಿಂಗಳು ನೀವು ನಿರ್ಧರಿಸಿದ ದಾರಿಯಲ್ಲಿ ನಿಲ್ಲದೆ ಪ್ರಯತ್ನಿಸಿ ನೋಡಿ. ಸಫಲತೆ ನಿಮ್ಮದು

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X