LATEST WITH HUB STATE NEWS

ಜಪಾನಿಗರ ನಿದ್ದೆ ಕೆಡಿಸಿದ ನಿಶ್ಯಬ್ದ ಹುಲಿ

ಎಲ್ಲೆಲ್ಲೂ ಕೇಳಿ ಬರುವ ಎದೆತಟ್ಟಿ ಉಚ್ಚರಿಸುವ ಹೆಸರೇ ವಿನಿಷಾ ಫೋಗಟ್,……………….

ಹೌದು….

ಬರೋಬ್ಬರಿ ನಾಲ್ಕು ವಿಶ್ವ ಚಾಂಪಿಯನ್ ಗೋಲ್ಡ್ ಮೆಡಲ್…………….. ಹಾಗು ಇತರೆ 11 ಗೋಲ್ಡ್ ಮೆಡಲನ್ನು ತನ್ನ ಮುಡಿಗೇರಿಸಿದ ಜಪಾನಿನ ಯುವಿ ಸುಸಾಕಿ ಯನ್ನು,,,,,,,,,,,,,,,, ಈ ವರ್ಷದ 2024ರ ಪ್ಯಾರಿಸ್ ನಲ್ಲಿ ನಡೆದ ಒಲಂಪಿಕ್ ನಲ್ಲಿ ಸೋಲಿಸಿದ ಅನ್ಯ ದೇಶದ ಮೊತ್ತ ಮೊದಲ ಮಹಿಳೆಯೆಂದರೆ ಅದು ನಮ್ಮ ದೇಶದ ಗೌರವ,,,,, ಹೆಮ್ಮೆ ವಿನಿಷಾ ಫೋಗಟ್…….. .

ಬಹುಶ ಜಪಾನಿಗರ ನಿದ್ದೆ ಕೆಡಿಸಿದ ನಿಶ್ಯಬ್ದ ಹುಲಿ ಎಂದರೆ ತಪ್ಪಾಗಲಾರದು ………………..

ವಿನಿಷಾ ಫೋಗಟ್ ಆಗಸ್ಟ್ 25 1994 ಹುಟ್ಟಿ ಬೆಳೆದ್ದಿದ್ದು ಹರಿಯಾಣದ ಚರಿಕಿ ದಾದ್ರಿ ಎಂಬ ಊರಿನಲ್ಲಿ………………….

ತಂದೆ ರಾಜಪಾಲ್ ಫೋಗಟ್ ತಾಯಿ ಪ್ರೇಮಲತಾ ಫೋಗಟ್ ಮೂಲತಃ ಇವರದ್ದು ಕುಸ್ತಿ ಕುಟುಂಬ…………….

2016 ರಲ್ಲಿ ಬಿಡುಗಡೆಯಾದ ಹಿಂದಿ ಭಾಷಾ ನಟ ರಾದ,,,,, ಅಮಿರ್ ಖಾನ್ ರವರು………….. ನಟಿಸಿದ ದಂಗಲ್ ಎಂಬ ಸಿನಿಮಾ,,,,,,,,, ಇವರ ಸೋದರ ಸಂಬಂಧಿಯಾದ ಗೀತಾ ಫೋಗಟ್ ಹಾಗು ಬಬಿತಾ ಕುಮಾರಿಯವರ ನಿಜ ಜೀವನದ ಚರಿತ್ರೆ ಎನ್ನಬಹುದು……..

ಈ ಸಿನಿಮಾ ನೋಡಿದರೆ ತಿಳಿಯಬಹುದು ಈ ಕುಸ್ತಿಪಟುಗಳು ಆ ಒಂದು ಮೆಡಲ್ ಗೋಸ್ಕರ ಅದೆಷ್ಟು ತ್ಯಾಗ ಮಾಡಿರಬಹುದೆಂದು…..

ಅದೊಂದು ಹಿಂದಿ ಶೋ ಗೆ ಬಂದಿದ್ದ ಬಬಿತಾ ಫೋಗಟ್ ಪಾನಿ ಪುರಿ ತಿನ್ನಲು ಹಾತೊರೆದಿದ್ದರು…………….. ಇದನ್ನು ತಿಳಿದ ವ್ಯವಸ್ಥಾಪಕರು,,,,,,,,,,,,, ಆ ಶೋ ನ ಸ್ಟೇಜ್ನಲ್ಲೇ ಅವರಿಗೆ ಪಾನಿಪುರಿ ತಿನ್ನುವ ವ್ಯವಸ್ಥೆ ಮಾಡಿದ್ದರೂ,,,,,,,,,,, ಅಲ್ಲಿಯೂ ಅವರ ತಂದೆ ಜಾಸ್ತಿ ತಿನ್ನಬೇಡ ಸಾಕು ಎಂದು ಸಿಗ್ನಲ್ ಮಾಡಿದ್ದು ಎಲ್ಲರ ಗಮನಕ್ಕೆ ಬರದೇ ಹೋಗಲಿಲ್ಲ……………….

ಹೀಗೆ ಈ ಒಂದು ಮೆಡಲನ್ನು ತನ್ನ ಮುಡಿಗಿರಿಸಲು ಇತರ ಮಕ್ಕಳು ಚಪ್ಪರಿಸಿ ತಿನ್ನುವ ಖಾರ ಪದಾರ್ಥ,,,,,,,,, ತಂಪು ಪಾನೀಯ,,,,,,,,, ಸಿಹಿ ಪದಾರ್ಥ ಇವೆಲ್ಲವುಗಳ ತ್ಯಾಗವನ್ನು ಮಾಡಿರೋದು ಒಮ್ಮೆ ನಾವೆಲ್ಲ ಯೋಚನೆ ಮಾಡಬೇಕಾದ ವಿಚಾರ………………..

ವಿನೀಶ್ ಫೋಗಟ್ ನ ಚಿಕ್ಕಪ್ಪರಾದ ಮಹಾವೀರ್ ಸಿಂಗ್ ರವರೆ ವಿನೀಶ್ ನ ಕುಸ್ತಿ ಗುರು………….

ಇದೆಲ್ಲವೂ ಶಾಂತವಾಗಿ ನಡೆದು ಹೋಗುವಾಗ ಅದೊಂದು ಕೆಟ್ಟ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಲು ಶುರುವಾಯಿತು .

ಅಂದು 2023 ರ ಜನವರಿ ತಿಂಗಳು ಬರೋಬ್ಬರಿ ಏಳು ಮಹಿಳಾ ಕುಸ್ತಿ ಪಟುಗಳು ಜಂತರ್ ಮಂತರ್ ನಲ್ಲಿ ಕುಳಿತು ತಮ್ಮ ಮೇಲೆ ಡಬ್ಲ್ಯೂ ಎಫ್ ಐ ನ ಇಬ್ಬರು ಮುಖ್ಯ ವ್ಯಕ್ತಿಗಳಿಂದ ಲೈಂಗಿಕ ಕಿರುಕುಳ ನಡೆಸಲಾಗಿದೆ ಎಂದು ಪ್ರತಿಭಟನೆ ಶುರುವಾಗಿತ್ತು .

ಡಬ್ಲ್ಯೂ ಎಫ್ ಐ ನ ಆ ಇಬ್ಬರು ವ್ಯಕ್ತಿಗಳು ಈ ಕೂಡಲೇ ರಾಜನಾಮೆಯನ್ನು ನೀಡಬೇಕಾಗಿ ಈ ಪ್ರತಿಭಟನೆಯಲ್ಲಿ ಪಟ್ಟು ಹಿಡಿದು ನಂತರ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ನ ಅದ್ಯಕ್ಶರಾಧ ಪಿ ಟಿ ಉಷಾ ರವರಿಗೆ ದೂರಿನ ಒಂದು ಪ್ರತಿಯನ್ನು ಕಳುಹಿಸಲಾಗಿ………………… ಆ ದೂರಿನಲ್ಲಿ ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಒಂದು ಕಮಿಟಿಯನ್ನು ರಚಿಸಲು ಕೋರಲಾಗಿತ್ತು.

ಅದರಂತೆ ಈ ಕಮಿಟಿಯಲ್ಲಿ ಮೇರಿ ಕೋಮ್ ಹಾಗು ಯೋಗೇಶ್ವರ್ ದತ್ತ್ ಅವರನ್ನು ಸೇರ್ಪಡೆ ಮಾಡಲಾಗಿತ್ತು…………… ಈ ಸಂಧರ್ಭ ದಲ್ಲಿ ಲೋಕಸಭೆಯ ಸದಸ್ಯ ಅಧಿಕಾರಿಯೊಬ್ಬರು ವಿಚಾರಣೆ ಮುಗಿಯುವವರೆಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಡಬ್ಲ್ಯೂ ಎಫ್ ಐ ನಿಂದ ಹೊರಗಿಡುವಂತೆ ಆಶ್ವಾಸನೆ ನೀಡಲಾಗಿತ್ತು………….

ಈ ನಂತರ ಡಬ್ಲ್ಯೂ ಎಫ್ ಐ ನ ಆರೋಪಿತ ವ್ಯಕ್ತಿಗಳು ತಮ್ಮ ಮೇಲೆ ಮಾಡಲಾದ ಆರೋಪಗಳು ಸುಳ್ಳು ಎಂದು ನಿರಾಕರಿಸಿ ಕೇವಲ ಒಬ್ಬ ಅಸಿಸ್ಟೆಂಟ್ ಸೆಕ್ರೆಟರಿಯೊಬ್ಬನನ್ನು ಹುದ್ದೆಯಿಂದ ಕೈ ಬಿಡಲಾಯಿತು……………

ದೊಡ್ಡ ದೊಡ್ಡ ತಿಮಿಂಗಿಲಗಳ ಮಧ್ಯೆ ಬಲಿಯಾಗುವುದು ಸಣ್ಣ ಸಣ್ಣ ಮೀನುಗಳೇ ಬಿಡಿ…….

ಈ ನಂತರ…………. ಒಬ್ಬಳು ಮೈನರ್ ಕುಸ್ತಿಪಟು ಸೇರಿದಂತೆ ಬರೋಬ್ಬರಿ ಏಳು ಮಹಿಳಾ ಕುಸ್ತಿಪಟುಗಳು ಪೊಲೀಸ್ ಸ್ಟೇಷನ್ನಲ್ಲಿ ಎಫ್ ಐ ರ್ ದಾಖಲು ಮಾಡಲು ಪ್ರಯತ್ನಿಸಿದರೂ ಯಾವುದೇ ಎಫ್ ಐ ರ್ ತೆಗೆದುಕೊಳ್ಳಲಾಗುವುದಿಲ್ಲ………………………

2023 ರ ಮೇ ತಿಂಗಳ 3 ತಾರೀಕಿನಂದು ನಡೆದ ಪ್ರತಿಭಟನೆಯಲ್ಲಿ ಕೆಲವು ಅಧಿಕಾರಿಗಳು ಕುಡಿದು ಬಂದು ಈ ಕುಸ್ತಿ ಪಟುಗಳನ್ನು ಎಳೆದಾಡಿದರು ಎನ್ನಲಾಗಿತ್ತು……………… ಈ ಎಳೆದಾಟದಲ್ಲಿ ಬಹಳಷ್ಟು ಮಹಿಳಾ ಪ್ರತಿಭಟನೆಕಾರರಿಗೂ ಹಾಗು ಅಧಿಕಾರಿ ವರ್ಗದವರಿಗೂ ತಲೆ ಹಾಗು ದೇಹದ ಇತರ ಭಾಗಗಳಲ್ಲಿ ಗಾಯಗಳಗ್ಗಿದ್ದವು.

ಈ ಮದ್ಯೆ ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆಂದು ಈ ಮಹಿಳಾ ಕುಸ್ತಿಪಟುಗಳ ಮೇಲೆ ಆರೋಪ ಹೊರಿಸಲಾಗಿತ್ತು.

ಈ ಎಲ್ಲದರ ನಡುವೆ ಡಬ್ಲ್ಯೂ ಎಫ್ ಐ ನ ಮೇಲೆ ಹೊರಿಸಿದ ಎಲ್ಲಾ ಆರೋಪಗಳು ಸುಳ್ಳು ಎಂದಾಗ…………….. ಮಹಿಳಾ ಕುಸ್ತಿಪಟುಗಳು ಹಾಗಿದ್ದರೆ ನೀವು ನಾರ್ಕೊ ಪರೀಕ್ಷೆ ಮಾಡಲು ಬನ್ನಿ ಎಂದು ಸವಾಲೆಸಿದ್ದಿದ್ದರು……………..

ಈ ಕೇಸ್ ಇನ್ನು ಚಲಾವಣೆಯಲ್ಲಿದ್ದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ನೋವು ಅನುಭವಿಸಿದವರಿಗೆ ದೇವರೇ ರಕ್ಷೆಯಾಗಲಿ ಎಂದು ಆಶಿಸುತ್ತೇನೆ…………………

ಈ ಮಧ್ಯೆ ನಮ್ಮ ಭಾರತೀಯ ಹೆಮ್ಮೆಯ ಪುತ್ರಿಗೆ ಮೆಡಲ್ ಸಿಗಲಿ ಅಥವಾ ಸಿಗದಿರಲಿ ಅವಳೇ ಭಾರತಕ್ಕೆ ಒಂದು ಮೆಡಲ್……………

ಜೈ ಭಾರತ್ .ಭಾರತ್ ಮಹಾನ್

———————————————————————————–

ನಾನು ನೋಡಿದ ಗಮನಿಸಿದ ಮನಮುಟ್ಟವ ಸತ್ಯಘಟನೆಗಲ್ಲನ್ನೇ ಹೆಚ್ಚಾಗಿ ಬರೆಯಲಾಗಿದೆ. ನನ್ನ ಕಥೆ ಕವನ ಹಾಗು ನಿಜ ಜೀವನದ ನಿಶ್ಯಬ್ದ ಕಥೆಗಳು ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಬರೆಯಲು ಮರೆಯದಿರಿ ಇತರರಿಗೂ ಶೇರ್ ಮಾಡಲು ಮರೆಯದಿರಿ

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X