MOTIVATIONAL SHORT STORIES

ಕೊಟ್ಟಿದ್ದೇ ಸಿಗುವುದು ಕೊಡದಿರುವುದು ಅಲ್ಲ. – ದ್ರೌಪದಿ ತನ್ನ ಮನಸ್ಸಿನಲ್ಲಿ ಅದನ್ನು ನೆನೆಸಿಕೊಂಡಾಗ ಶ್ರೀ ಕೃಷ್ಣ ನಗುತ್ತ ಹೇಳುತ್ತಾನೆ,

ಕೊಟ್ಟಿದ್ದೇ ಸಿಗುವುದು

ದುರ್ಯೋಧನನ ಸಭೆ. ದ್ರವಪದಿಯ ಕೂದಲನ್ನು ಎಳೆದುಕೊಂಡು ಬಂಡ ದುಶ್ಯಾಸನ ಅವಳ ಸೀರೆಯನ್ನು ಎಳೆಯುವ ಪ್ರಯತ್ನದಲ್ಲಿದ್ದ. ಅವಳು ಮೊತ್ತ ಮೊದಲು ಸಹಾಯಕ್ಕಾಗಿ ನೋಡಿದ್ದು ತನ್ನ ಪತಿಗಳಾದ ಪಂಚ ಪಾಂಡವರ ಕಡೆ. ಆದರೆ, ಆಗಲೇ ಗುಲಾಮರಾಗಿದ್ದ ಅವರಿಂದ ತಲೆ ತಗ್ಗಿಸಿ ನಿಲ್ಲುವುದರ ಹೊರತು ಬೇರೇನೂ ಮಾಡಲಾಗಲಿಲ್ಲ
ಅಂತೆಯೇ ಸಭೆಯಲ್ಲಿದ್ದ ಗುರುಹಿರಿಯರು ಯಾರೂ ಮಿಸುಕಾಡಲೂ ಇಲ್ಲ. ಕೊನೆಯದಾಗಿ ಶ್ರೀಕೃಷ್ಣ ನನ್ನ ಸ್ತುತಿಸಿ “ನೀನಲ್ಲದೆ ನನ್ನನ್ನು ಈ ವಿಪತ್ತಿನಿಂದ ಪಾರು ಮಾಡುವವರು ಯಾರು ಎಂದು ಮನಃಪೂರ್ವಕವಾಗಿ ಬೇಡಿಕೊಳ್ಳುತ್ತಾಳೆ.

ಶ್ರೀ ಕೃಷ್ಣನ ದಯೆ ಇಲ್ಲವಾಗಿ, ದ್ರೌಪದಿ ತನ್ನ ಎರಡೂ ಕೈಗಳನ್ನು ಮೇಲೆತ್ತಿ ಬೇಡಿಕೊಳ್ಳುತ್ತಾಳೆ. ಆಗ ಶ್ರೀ ಕೃಷ್ಣ ನೇ ಅವಳಿಗೆ ಅನುಗ್ರಹ ಮಾಡುತ್ತಾನೆ. ದ್ರೌಪದಿ ಸೀರೆ ಅಕ್ಷಯವಾಗುತ್ತದೆ.

ಶ್ರೀ ಕೃಷ್ಣ ಸ್ವಾಮಿಯೇ, ನೀನೇ ನನ್ನ ಮಾನವನ್ನು ರಕ್ಷಿಸಿದೆ. ನಿನಗೆ ನಾನು ಹೇಗೆ ಕೃತಜ್ಞತೆ ಸಲ್ಲಿಸಲಿ ? ಎಂದು ಕೇಳಿಕೊಳ್ಳುತ್ತಾಳೆ. ಆಗ, ಅದೃಶ್ಯದಲ್ಲಿ ಶ್ರೀ ಕೃಷ್ಣ ಅವಳ ಕಿವಿಯ ಬಳಿ ಬಂದು ಹೇಳುತ್ತಾನೆ, “ದೇವರೆಂದು ನೀನು ನಂಬಿದ ನನ್ನ ದಯೆಯೆನೋ ನಿಜವೇ. ಆದರೆ, ಅದಷ್ಟೇ ಅಲ್ಲ. ನೀನು ಮಾಡಿದ ಪುಣ್ಯ ಕಾರ್ಯದ ಫಲವು ಇದಕ್ಕೆ ಕಾರಣ. ನೀನು ಈ ಹಿಂದೆ ಯಾರಿಗಾದರೂ ಬಟ್ಟೆಯನ್ನು ದಾನ ಮಾಡಿದ್ದೀಯಾ, ಹೇಳು ?” ಮಹಾರಾಣಿಯಾದ ದ್ರೌಪದಿ ಎಷ್ಟೆಷ್ಟೋ ಜನರಿಗೆ ವಸ್ತ್ರದಾನ ಮಾಡಿರಬಹುದು ಅದನ್ನು ಅವಳು ಲೆಕ್ಕವಿಟ್ಟಿದ್ದಾಳೆಯೇ ?

ಶ್ರೀ ಕೃಷ್ಣ ಹೇಳುತ್ತಾನೆ, “ಕೇವಲ ದಾನವಾದರೆ ಸಾಲದು. ಸತ್ಪಾತ್ರ ದಾನವಾಗಬೇಕು. ತೀರಾ ಅಗತ್ಯವಿರುವವರಿಗೆ ನೀನು ಅಂಬರವನ್ನು ದಾನ ಮಾಡಿರಬೇಕು. ನೆನಪು ಮಾಡು”

ದ್ರೌಪದಿ ತನ್ನ ಬಾಲ್ಯದ ದಿನಗಳ ಕಡೆ ಹೋಗುತ್ತಾಳೆ. ಪಾಂಚಾಲ ದೇಶದ ನದಿಯ ಬದಿಯಲ್ಲಿ ಆಟವಾಡುತ್ತಿರುವಾಗ ಆ ನದಿಯಲ್ಲಿ ಓರ್ವ ಸನ್ಯಾಸಿ ಸ್ನಾನ ಮಾಡಿಕೊಂಡಿರುತ್ತಾನೆ. ಅವನ ಕೌಪಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುತ್ತದೆ. ಎಲ್ಲರೂ ನಗುತ್ತಾರೆ. ಆದರೆ, ದ್ರೌಪದಿ ಹಾಸ್ಯ ಮಾಡುವುದಿಲ್ಲ. ತನ್ನ ಪೀತಾಂಬರವನ್ನು ಹರಿದು ಒಂದು ಅಂಶವನ್ನು ಸನ್ಯಾಸಿಯಕಡೆಗೆ ಎಸೆಯುತ್ತಾಳೆ. ಸನ್ಯಾಸಿ “ನಿನಗೆ ಒಳ್ಳೆಯದಾಗಲಿ ಮಗಳೇ ” ಎಂದು ಆಶೀರ್ವಾದ ಮಾಡುತ್ತಾನೆ.

ದ್ರೌಪದಿ ತನ್ನ ಮನಸ್ಸಿನಲ್ಲಿ ಅದನ್ನು ನೆನೆಸಿಕೊಂಡಾಗ ಶ್ರೀ ಕೃಷ್ಣ ನಗುತ್ತ ಹೇಳುತ್ತಾನೆ, ಕೊಟ್ಟಿದ್ದೇ ಸಿಗುವುದು ಕೊಡದಿರುವುದು ಅಲ್ಲ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X