ಬೆಂಗಳೂರಿನ ಐಟಿ ತವರು ಎಂದೇ ಕರೆಯಲ್ಪಡುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆಯ ಓಡಾಟ ಅಲ್ಲಿಯ ಜನರಿಗೆ ತುಂಬಾ ಟೆನ್ಷನ್ ಆಗಿತ್ತು. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ಬಳಿಯೇ ಚಿರತೆಯ ಓಡಾಟ ಕಂಡು ಜನರು ಭಯ ಭೀತರಾಗಿದ್ದರು. ಚಿರತೆಯ ಸೆರೆ ಯಾವಾಗ ಎಂಬ ಪ್ರಶೆಗಳು ಅವರನ್ನ ಕಾಡುತ್ತಿತ್ತು. ಅರಣ್ಯ ಇಲಾಖೆಯವರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತಿರುವ ಚಿರತೆ ಸೆರೆ ಹಿಡಿಯಲು ತಯಾರಿ ನಡೆಸುತಿದ್ದರು.
ಎಲೆಕ್ಟ್ರಾನಿಕ್ ಸಿಟಿ ಭಾಗದ ಹೆಲಿಪ್ಯಾಡ್ ಸಮೀಪದಲ್ಲೇ ಚಿರತೆ ಇರುವ ಸುದ್ದಿ ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೋಟಿ ಕೋಟಿ ರೂಪಾಯಿ ಆದಾಯ ತರುವ ಕಂಪನಿಗಳು ಇವೆ. ಇನ್ಫೋಸಿಸ್, ವಿಪ್ರೋ, ಸಿಮೆನ್ಸ್, ಎಚ್‌ಸಿಎಲ್ ಹೀಗೆ ನೂರಾರು ಕಂಪನಿಗಳು ಇದ್ದಾವೆ. ಹೀಗಿದ್ದರೂ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಜಾಗದಲ್ಲಿ ಈಗ ಕೂಡ ಹಸಿರಿನಿಂದ ಕೂಡಿದೆ. ಬೆಂಗಳೂರಿನ ಹೊರ ವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಲಿ ಜಾಗಗಳು ಇರುವುದರಿಂದ ಎಲೆಕ್ಟ್ರಾನಿಕ್ ಸಿಟಿಯ ಹೆಲಿಪ್ಯಾಡ್ ಪ್ರದೇಶದಲ್ಲಿ ಸಾಕಷ್ಟು ಮರ & ಗಿಡಗಳಿಂದ ತುಂಬಿ ಹೋಗಿವೆ. ಇದೇ ಜಾಗದಲ್ಲಿ ಚಿರತೆಯೊಂದು ಸೇರಿಕೊಂಡಿತ್ತು.
ಚಿರತೆ ಮೊದಲಿಗೆ ಆನೇಕಲ್‌ನ ಜಿಗಣಿ ಸಮೀಪದ ಕ್ಯಾಲಸನಹಳ್ಳಿಯ ಲೇಔಟ್ ಬಳಿ ಕಾಣಸಿಕ್ಕಿದ್ದು ಇದರ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಕೂಡ ರೆಕಾರ್ಡ್ ಆಗಿತ್ತು. ಈಗ ಅದೇ ಚಿರತೆ ಎಲೆಕ್ಟ್ರಾನಿಕ್ ಸಿಟಿ ಪ್ರದೇಶಕ್ಕೂ ಬಂದಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಯಾಕಂದ್ರೆ ಕೆಲವೇ ದಿನಗಳ ಹಿಂದೆ ಚಿರತೆ ಒಂದು ರೋಡ್‌ನಲ್ಲಿ ಓಡಾಟ ನಡೆಸಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಇದರ ಜಾಡನ್ನು ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಡುಕಾಟ ನಡೆಸಿದ ಪರಿಣಾಮ ಇದೀಗ ಹೆಲಿಪ್ಯಾಡ್‌ನ ಪೊದೆಯಲ್ಲಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಚಿರತೆ ಸೆರೆ ಹಿಡಿದು ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿಚಿರತೆಗೆ ಚಿಕಿತ್ಸೆ ನೀಡಲಾಗಿದೆ ಮುಂದೆ ಅದನ್ನು ಕಾಡಿಗೆ ಬಿಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಚಿಂತನೆ ನಡೆಸಿದ್ದಾರೆ. ಇದರಿಂದ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಇರುವ ಜನರು ನಿಟ್ಟುಸಿರು ಬಿಡುವಂತಾಗಿದೆ.ಹಾಗೆ, ಚಿರತೆಗಳು ಮತ್ತೆ ಈ ಪ್ರದೇಶದ ಕಡೆಗೆ ಹೆಜ್ಜೆ ಇಡದಂತೆ ತಡೆಯಲು ಪೊದೆಗಳು ಇರುವಂಥ ಜಾಗಗಳನ್ನು ಸ್ವಚ್ಛ ಮಾಡುವ ಕಾರ್ಯ ನಡೆಯಲಿದೆ.