MOTIVATIONAL TIPS 4 LIFE

ಏಕಾಗ್ರತೆಯ ಕಲೆ – ಇಂಗ್ಲಿಷ್ ನ ಮಾತು ಇಲ್ಲಿ ಸೂಕ್ತ. ಕೋಪ ನಾವು ಇತರರ ತಪ್ಪಿಗಾಗಿ ಅನುಭವಿಸುವ ಶಿಕ್ಷೆ. ಹೀಗಾಗಿ ನೋವಿನ ಕಾರಣವನ್ನು ನಮ್ಮೊಳಗೇ ಹುಡುಕಿ ಸಂಪೂರ್ಣ ವ್ಯಕ್ತಿತ್ವ ವಿಕಾಸನದತ್ತ ಹೆಜ್ಜೆ ಇಡಬೇಕು.

ಏಕಾಗ್ರತೆಯ ಕಲೆ

ಮಾನಸಿಕ ಶಕ್ತಿಯ ಏಕಾಗ್ರತೆಯ ಮೂಲಕ ಪ್ರಪಂಚದಲ್ಲಿ ಇರುವ ಸಕಲ ವಿದ್ಯೆಗಳನ್ನು ತಟ್ಟಬಹುದು ಹಾಗೂ ಅದರ ರಹಸ್ಯವನ್ನು ಅರಿಯಬಹುದು.  ಏಕಾಗ್ರತೆ ಜಾಸ್ತಿಯಾದಷ್ಟು ನಮ್ಮ ಶಕ್ತಿ ಅದರ ಮೇಲೆ ಕೇಂದ್ರೀಕೃತವಾಗುತ್ತದೆ. ಶಿಕ್ಷಣದ ಸಾರವೇ ಮನಸ್ಸಿನ ಏಕಾಗ್ರತೆ. ಅದು ಬರಿ ವಿಷಯ ಸಂಗ್ರಹವಲ್ಲ. ಅದು ನಮ್ಮ ಇಚ್ಛೆಯ ಪ್ರಕಾರ ವಿಷಯ ಸಂಗ್ರಹಿಸಿ ಅನಾಸಕ್ತಿಯ ವಿಷಯದ ಮೇಲೆ ನಿಗ್ರಹಗಳಿಸಿ ನಂತರ ಏಕಾಗ್ರತೆ ಹೊಂದುವುದು. ಸ್ವಾಮಿ ವಿವೇಕಾನಂದರ ಈ ಮಾತು ಇಲ್ಲಿ ಮಾನನೀಯ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮಗೆ ಏಕಾಗ್ರತೆ ಕಡಿಮೆ ಎಂದು ಪ್ರಶ್ನಿಸುತ್ತಾರೆ. ಇದು ಕೇವಲ ಅಧ್ಯಯನದ ಹಿಂದೆ ಇರುವ ವಿದ್ಯಾರ್ಥಿಗಳ ಪ್ರಶ್ನೆಯಲ್ಲ. ಬಹಳ ಮುಂದೆ ಇರುವ ವಿದ್ಯಾರ್ಥಿಗಳು ಇದೆ ಪ್ರಶ್ನೆ ಕೇಳುತ್ತಾರೆ. ಇದು ಬರೀ ಏಕಾಗ್ರತೆಯ ಪ್ರಶ್ನೆಯಲ್ಲ. ಅದು ಎಲ್ಲಿಯೋ ಏಕಾಗ್ರಗೊಂಡಿರುವ ಮನಸ್ಸನ್ನು ಹಿಡಿದು ಇಡುವುದು ಇದು ಮನೋ ನಿಗ್ರಹವನ್ನು ಅವಲಂಬಿಸಿದೆ. ಇದಕ್ಕಾಗಿ ಮನಸ್ಸಿನ ಸ್ವರೂಪವನ್ನು ಅರಿಯಬೇಕಿದೆ.

ಮನಸ್ಸಿನ ಕ್ರಿಯೆಗಳ ಅನುಸಾರವಾಗಿ ಅದನ್ನು ವಿವಿಧ ವಿಷಯವಾಗಿ ಅರಿಯಬೇಕಾಗುತ್ತದೆ. ಅಮೂಲಾಗ್ರವಾಗಿ ಮೂರು ಶಕ್ತಿಗಳನ್ನು ಗುರುತಿಸಬಹುದು. ಆಲೋಚನಾ ಶಕ್ತಿ, ಭಾವ ಶಕ್ತಿ, ಮತ್ತು ಇಚ್ಛಾ ಶಕ್ತಿ. ಇಂದಿನ ಸಂಕೀರ್ಣ ಜೀವನದಲ್ಲಿ ನಮ್ಮ ನರಮಂಡಲದ ಒತ್ತಡ ನಿಗ್ರಹಿಸಬೇಕಾಗಿದೆ. ಹೀಗಾಗಿ ಶಾಂತ ಮನಸ್ಕರಾಗುವುದು ಅವಶ್ಯಕ. ಎಲ್ಲವು ನಮ್ಮ ನಿಯಂತ್ರಣದಲ್ಲಿಲ್ಲ ಎಂಬುದನ್ನು ಅರಿತು ಅನೀವಾರ್ಯವಾದುದನ್ನು ಶಾಂತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಹೊಂದಬೇಕು. ಅನವಶ್ಯಕ ಬಾವೊದ್ಯೆಗಗಳಿಗೆ ಪರವಶರಾಗದೆ ನಮ್ಮ ಮನಶಾಂತಿ ದೇಹ, ಅರೋಗ್ಯ ಕಾಪಾಡಿಕೊಳ್ಳಬೇಕು. ಇಂಗ್ಲಿಷ್ ನ ಮಾತು ಇಲ್ಲಿ ಸೂಕ್ತ. ಕೋಪ ನಾವು ಇತರರ ತಪ್ಪಿಗಾಗಿ ಅನುಭವಿಸುವ ಶಿಕ್ಷೆ. ಹೀಗಾಗಿ ನೋವಿನ ಕಾರಣವನ್ನು ನಮ್ಮೊಳಗೇ ಹುಡುಕಿ ಸಂಪೂರ್ಣ ವ್ಯಕ್ತಿತ್ವ ವಿಕಾಸನದತ್ತ ಹೆಜ್ಜೆ ಇಡಬೇಕು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X