ಉಪ್ಪು ಹಾಕಿದರೆ ಮಂಜುಗಡ್ಡೆ ಕರಗಿ ನೀರಾಗುವುದು ಯಾಕೆ ?
ನೀರಿನ ಉಷ್ಣತೆಯನ್ನು ಶೂನ್ಯ ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತಲೂ ಕಡಿಮೆಗೆ ಇಳಿಸಿದಾಗ ಮಂಜುಗಡ್ಡೆಯಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ದ್ರವರೂಪಿ ನೀರಿನಲ್ಲಿ ಬಿಲಿಯಂತರ ಕಣಗಳು ಅಪೂರ್ವ ಶಕ್ತಿಯೊಂದಿಗೆ ಅತ್ತಿಂದಿತ್ತ ಓಡಾಡುತ್ತಿರುತ್ತವೆ ಫ್ರೀಜಿನ್ಗ್ ಆರಂಭವಾಗುತ್ತಿದ್ದಂತೆಯೇ ಈ ಚಲನಚಿತ್ರ ಕಡಿಮೆಯಾಗುತ್ತದೆ ಮತ್ತು ಒಂದು ಹಂತದಲ್ಲಿ ಸ್ತಬ್ಧವೇ ಆಗುತ್ತದೆ. ಇದನ್ನೇ ನಾವು ಮಂಜುಗಡ್ಡೆ ಅನ್ನುವುದು. ಆಗ ಕಣಗಳು ಒಂದಕ್ಕೊಂದು ಲಾಕ್ ಆಗಿ ಘನ ರೂಪವನ್ನು ಪಡೆಯುತ್ತವೆ. ಹೀಗೆ ಬಂದದಲ್ಲಿ ಜೊತೆಗೂಡಿದ ಕಣಗಳು ಬೇರೆ ಬೇರೆ ರೀತಿಯ ಶಕ್ತಿಯ ಮಟ್ಟವನ್ನು ಹೊಂದಿರುತ್ತವೆ.
ಕೆಲವು ಹೆಚ್ಚು ಕೆಲವು ಕಡಿಮೆ. ಈ ಕಣಗಳಲ್ಲಿ ಕೆಲವು ತುಂಬಾ ಗಟ್ಟಿಯಾಗಿ ಬಂದದಲ್ಲಿ ಒಡ ಮೂಡಿದ್ದರೆ, ಕೆಲವು ಯಾವುದೇ ಕ್ಷಣ ಬಿಟ್ಟು ಹೋಗುವ ಸ್ಥಿತಿಯಲ್ಲಿರುತ್ತದೆ ಇಂತಹ ಸ್ಥಿತಿಯಲ್ಲಿರುವ ಮಂಜುಗಡ್ಡೆ ಮೇಲೆ ಉಪ್ಪು ಸುರಿದರೆ ಕೆಲವು ಭಾಗ ಕರಗಲು ಶುರುವಾಗುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೆ ಉಪ್ಪಿನಲ್ಲಿ ಸೋಡಿಯಂ ಮತ್ತು ಕ್ಲೋರಿನ್ ಎಂಬ ಎರಡು ಕಣಗಳಿವೆ. ಉಪ್ಪು ಹಾಕಿದಾಗ ಸೋಡಿಯಂ ಮತ್ತು ಕ್ಲೋರಿನ್ ಗಳು ನೀರಿನ ಸಡಿಲಕಣಗಳ ಜೊತೆಗೆ ವರ್ತಿಸಿ ಮಂಜುಗಡ್ಡೆಯ ಕಣಗಳ ನಡುವಿನ ಬಂದವನ್ನು ಸಡಿಲಗೊಳಿಸುತ್ತದೆ ಹೀಗಾಗಿ ಮಂಜುಗಡ್ಡೆ ಕರಗುತ್ತದೆ.
Leave feedback about this