wowstava Blog LATEST WITH HUB STATE NEWS ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ – ಮಾರಕಾಸ್ತ್ರಗಳಿಂದ ಹಲ್ಲೆ
LATEST WITH HUB STATE NEWS

ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ – ಮಾರಕಾಸ್ತ್ರಗಳಿಂದ ಹಲ್ಲೆ

ಕೋಲಾರ : ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ ಉಂಟಾದ ಘಟನೆ ಸಪ್ಟೆಂಬರ್ 16 ರಂದು ನಡೆದಿದೆ. ಈ ಘಟನೆಯಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ ಕ್ಲಾಕ್ ಟವರ್ ಬಳಿ ಸಂಭವಿಸಿದ್ದು, ಸೈಯದ್ ಸಲ್ಮಾನ್, ಸೈಯದ್ ಸೈಫ್, ಹುಸೇನ್ ಕಾಷಿಪ್, ಹಾಗೂ ಖಲೀಲ್ ಅಹ್ಮದ್ ಹಲ್ಲೆಗೆ ಒಳಗಾದವರು. ಹಲ್ಲೆ ನಡೆಸಿದ ಗುಂಪನ್ನು ತಾಹೀರ್ ಹಾಗೂ ಸೈಯದ್ ವಸೀಂ ಪಾಷಾ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಎಸ್​ಪಿ ನಿಖಿಲ್ ಅವರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡುತ್ತಿದ್ದಾರೆ.

Exit mobile version