MOTIVATIONAL REAL N REEL

ಆ ಶ್ರೀಮಂತೆಗೂ ಆ ಬಿಕ್ಷುಕನಿಗೂ ಇದ್ದದು ಆ ಒಂದು ಸಣ್ಣ ಗೆರೆ

ನಾನು ನನ್ನದು ನನ್ನ ದಾಹ…

ನಮ್ಮ ದೇವಾಲಯದಲ್ಲಿ ಎಲ್ಲಾ ಬೇಸಿಗೆ ರಜೆಗಳಲ್ಲಿ ಕೆಲವು ಆಕ್ಟಿವಿಟೀಸ್ ಗಳನ್ನ ಮಕ್ಕಳಿಗೆ ಅಂತಾನೆ ಹಮ್ಮಿಕೊಂಡಿರ್ತಿವಿ.

ಅದು ಕೇವಲ 1 ವಾರ ಅಷ್ಟೆ. ನಮ್ಮ ಗುರುಗಳು ತುಂಬಾ ಒಳ್ಳೆಯವರು……ಮಕ್ಕಳಿಗೆ ಬೇಕಾದ ಬಿಸ್ಕೆಟ್ ಮತ್ತು ಜ್ಯೂಸು ಇವೆರಡನ್ನೂ ತುಂಬಾ ಮುತುವರ್ಜಿ ವಹಿಸಿ ಏರ್ಪಡಿಸುತ್ತಾರೆ…..

ಈ ಜ್ಯೂಸು ಮತ್ತು ಬಿಸ್ಕುಟ್ ಹಂಚೋ ಕೆಲಸವನ್ನು ಸಹಜವಾಗಿ ನಾನು ಕೆಲಸ ನಿರ್ವಹಿಸಿದ್ದೆ.

ಈ ಸಂದರ್ಭ ಒಂದು ಸಣ್ಣ ಘಟನೆ ನಡೆಯಿತು. ಅದನ್ನೇ ಹೇಳೋಣ ಅಂತ ಇಲ್ಲಿ ಬರೀತಿದ್ದೀನಿ.  ಸುಮಾರು 11 ಗಂಟೆಗೆ ಮಕ್ಕಳಿಗೆ ಬ್ರೇಕ್ ಕೊಟ್ಟು ಜ್ಯೂಸು ಹಂಚಿದ್ದಾಯಿತು. ಈ ಸಂದರ್ಭದಲ್ಲಿ ಏನಿಲ್ಲಾಂದ್ರೂ 5 ರಿಂದ 10 ಲೋಟ ಜ್ಯೂಸು ಆದ್ರೂ ಒಮ್ಮೊಮ್ಮೆ ಮಿಕ್ಕುತ್ತೆ. ಈ ಮಿಕ್ಕಿದ ಜ್ಯೂಸು ನ ಅಲ್ಲೇ ಕಾಯ್ಕೊಂಡು ಕೂತಿರೋ ಕೆಲವು ಅಪ್ಪ ಅಮ್ಮಂದಿರಿಗೂ ಕೊಡೋದು ವಾಡಿಕೆ.

ಕೆಲವುರು ತಗೋತಾರೆ…. ಕೆಲವುರು ಇಲ್ಲ ಬೇಡ ಅಂದು ಬಿಡುತ್ತಾರೆ. ಹಾಗಂತ ತುಂಬ ಪೋಷಕರೇನೂ ಕಾಯ್ಕೊಂಡು ಕೂತಿರೋಲ್ಲ.

ತೀರಾ ಸಣ್ಣ ಮಕ್ಕಳಾಗಿದ್ದರೆ ಒಂದೋ ಎರಡು ಹೆಂಗಸರು ಅಷ್ಟೆ.

ಈ ಮದ್ಯದಲ್ಲಿ ಕೆಲವು ಭಕ್ತರು ದೇವಾಲಯಕ್ಕೆ ಬಂದು ಹೂಗೋದುಂಟು.

ಅವರು ಕೆಲವೊಮ್ಮೆ ದೇವಾಲಯದ ಮೆಟ್ಟಿಲಲ್ಲಿ ಕೂತಿರೋದು  ಕಾಣಲಿಕ್ಕೆ ಸಿಗ್ತಾರೆ.

ಹೀಗೆ ಅದೊಂದು ದಿನ ಬಹಳ ಒಳ್ಳೆ ಡ್ರೆಸ್ ಮಾಡಿದ ಸುಮಾರು 4೦ ರಿಂದ 45 ರ ಆಸುಪಾಸಿನ ಭಕ್ತೆಯೊಬ್ಬಳು ಅಲ್ಲಿಗೆ ಬಂದಿದ್ದಳು.

ಅವಳು ಆಗರ್ಭ ಶ್ರೀಮಂತೆಯೇನು ಅಲ್ಲದಿದ್ದರೂ ಮಾದ್ಯಮವರ್ಗಕ್ಕಿಂತ ಸ್ವಲ್ಪ ಮೇಲು ಅಂತಾನೆ ಹೇಳಬಹುದು.

ಸರಿ…. ಈಗ ಈ ಹೆಂಗಸು ಬಂದಾಗ ನಮ್ಮ ಜ್ಯೂಸು ಬಿಸ್ಕುಟ್ ಹಂಚೋ ಕಥೆಗೆ ಬರೋಣ.

ಅಂದು ನಾನು ಎಲ್ಲಾ ಮಕ್ಕಳಿಗೆ ಜ್ಯೂಸು ಹಂಚಿ ಉಳಿದಿರೋ ಜ್ಯೂಸ್ನ ಅಲ್ಲಿ ಕುಳಿತಿರುವ ಆ ಪೋಷಕರಿಗೆ ಹಂಚಲು ಅದೇ ಟ್ರೇ ನಲ್ಲಿ ತಗೊಂಡು ಹೋದೆ.

ಆ ಸಂದರ್ಭದಲ್ಲಿ ಆ ಭಕ್ತೆ ಕಂಡಳು.

ನಾನು ಜ್ಯೂಸು ತಗೊಂಡು ಮೆಟ್ಟಲು ಹತ್ತೋವಾಗ ಅವಳು ನನ್ನನು ಗಮನಿಸಿದ್ದು ನನ್ನ ಗಮನಕ್ಕೆ ಬಂತು.

ಸರಿ ನಾನು ಹೇಳಿದೆ “ಮೇಡಂ ಜ್ಯೂಸು ತಗೋಳಿ ”

ಆ ಭಕ್ತೆ ಅವಕ್ಕಾದಳು

“ಇಟ್ಸ್ ಓಕೆ”

ಅಂದರೂ ಅವಳ ಮುಖದಲ್ಲಿ ಬೇಸಿಗೆಯ ಸೆಕೆ ಎದ್ದು ಕಾಣುತಿತ್ತು.

“ಮಾಮ್ ಪ್ಲೀಸ್ ” ಎಂದೇ ನಾನು……….

ತಕ್ಪಣ್ಣಕ್ಕೆ ಜ್ಯೂಸು ತಗೊಂಡು ಸ್ಟೈಲ್ ಆಗಿ ಹೀರುತ್ತಾ ಕೂತಳು,,,

ಈ ಗ್ಯಾಪ್ ನಲ್ಲಿ……….

ನನ್ನ ಮನೆ ದೇವಾಲಯಕ್ಕೆ ತುಂಬಾ ಹತ್ತಿರ…..

ಅಂದು ನನ್ನ ಚಿಕ್ಕ ಪಾಪು ಮನೆಯಲ್ಲಿ ಇದ್ದಿದ್ದರಿಂದ

ಪಟ್ಟನೆ ಮನೆಗೆ ಹೋಗಿ ನೋಡಿ ಬರೋಣ ಅಂತ,,,,,,, ಟ್ರೇ ನ ಅಲ್ಲೇ ಇದ್ದ ನನ್ನ ಸಹೋದ್ಯೋಗಿ ಕೈಯಾಯ್ಲ್ಲಿ ಇರಿಸಿ……

ಸರ ಸರನೆ ಹೆಜ್ಜೆಯಿಡುತ್ತ ಹೊರಟೆ………..

ದೇವಾಲಯದಿಂದ ಹೊರಗೆ ಗೇಟ್ ನ ಬಳಿ ಬಂದ ನನಗೆ ಆ ಭಕ್ತೆ ಕಾಣಿಸಿದಳು.

ಯಾರಿಗೋ ಕಾಯುತಿದ್ದಳು…….

ಅದೇ ಸಂದರ್ಭ ಇನ್ನೇನು ನಾನು ಅವಳನ್ನು ದಾಟಿ ಹೋಗಬೇಕು….

ಅಲ್ಲಿ ಬಂದ ಒಬ್ಬ ಭಿಕ್ಷುಕ………

11 ಗಂಟೆ ಅಂದ್ರೆ ಯೋಚಿಸಿ………….

ಉರಿ ಬಿಸಿಲು…. ಅವನು ಆ ಭಕ್ತೆಯ ಕಡೆ ಕೈ ಒಡ್ಡಿ ಏನೋ ಬಿಕ್ಷೆ ಕೇಳಿದ……..

ನಾನು ಫ್ರೀಯಾಗಿ ಕೊಟ್ಟ ಜ್ಯೂಸುನ್ನು ಕುಡಿದ ಆ ಮಹಿಳೆಯ ರಿಯಾಕ್ಷನ್ ನೋಡ್ಬೇಕಿತ್ತು……….

ಆ ಭಿಕ್ಷುಕನ ಕಡೆಗೆ……………”ಅಯ್ಯೋ ಹೋಗಯ್ಯಾ………… ನಿಂಗೆ ನಾನೇ ಬೇಕಿತ್ತಾ??????????”

“ಬಂದು ರಗಳೆ ಮಾಡ್ಲಿಕ್ಕೆ ನಿಂಗೆ ದುಡಿದು ತಿನ್ನಲು ಸಾಧ್ಯವಿಲ್ವಾ? ಹೋಗಯ್ಯಾ ಹೋಗು” ಎಂದಳು………..

ಅವಳ ಆ ವ್ಯವಹಾರ ಅವಳ ಆ ಮುಖದ ರಿಯಾಕ್ಷನ್ ನೋಡಿ ನನಗೆ ಅನಿಸಿತು…………….. ಅಪ್ಪಾ ತಂದೆ ಇವಳಿಗಾ ನಾನು ಜ್ಯೂಸು ಕುಡಿಯಲು ಕೊಟ್ಟಿದ್ದು ?

ಒಂತರ ಇವಳು ಕೂಡ ಕುಡಿದದ್ದು ಬಿಕ್ಷೆಯ ಜ್ಯೂಸು ಅಲ್ವೇ ???????

ಆ ಒಂದು ಸಣ್ಣ ಗೆರೆ ಆ ಬಿಕ್ಷುಕನಿಗೂ ಇವಳಿಗೂ ಅಲ್ವೇ ?

ಅವಳೂ ಕುಡಿದದ್ದು ಧರ್ಮಕ್ಕೆ ………….ಇವನು ಕೇಳಿದ್ದು ಧರ್ಮಕ್ಕೆ.

ಅವನು ಹೊಟ್ಟೆಗಿಲ್ಲದಿದ್ದರೂ,,,,,,,,,,,,,, ಕೇಳಿದರೂ ಸಿಗಲಿಲ್ಲ …..

ಇವಳಿಗೆ ಹೊಟ್ಟೆಗಿದ್ದರೂ ಕೇಳದೇನೆ ಸಿಕ್ಕಿತ್ತಲ್ಲ.

ಎಂಥ ವಿಪರ್ಯಾಸ ?

ನನಗೆ ಅನಿಸಿತು….. ಛೆ ಸ್ವಲ್ಪ ಮೊದಲು ಈ ಭಿಕ್ಷುಕ ಬಂದಿದ್ರು

ಗೇಟಿನ ಒಳಗೆ ಕರೆದು ಅವನಿಗೂ ಒಂದು ಗ್ಲಾಸ್ ಜ್ಯೂಸು ಕೊಟ್ಟಿದ್ದಿದರೆ……

ಈ ಮಹಿಳೆಗೆ ಅವಳೂ ಅವನಿಗಿಂತ ಹೊರತೇನಲ್ಲ”””

ಎಲ್ಲರೂ ಒಂದಿಲ್ಲ ಒಂತರ ಭಿಕ್ಷೆಬೇಡಿ ತಿನ್ನುವವರೇ

ಅನ್ನೋ ಒಂದು ಪಾಠ ಖಂಡಿತ ಕೊಡಬಹುದಿತ್ತೇನೋ..

ಎಲ್ಲಾನು ಪಟ್ ಅಂತ ತಲೆಗೆ ಬರಲ್ಲ ರೀ

———————————————————————————-

 

ನಾನು ನೋಡಿದ ಗಮನಿಸಿದ ಮನಮುಟ್ಟವ ಸತ್ಯಘಟನೆಗಲ್ಲನ್ನೇ ಹೆಚ್ಚಾಗಿ ಬರೆಯಲಾಗಿದೆ. ನನ್ನ ಕಥೆ ಕವನ ಹಾಗು ನಿಜ ಜೀವನದ ನಿಶ್ಯಬ್ದ ಕಥೆಗಳು ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಬರೆಯಲು ಮರೆಯದಿರಿ ಇತರರಿಗೂ ಶೇರ್ ಮಾಡಲು ಮರೆಯದಿರಿ

 

ನಿಶ್ಯಬ್ದ ಘಟನೆಗಳು

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X