ಚೆನ್ನೈ : 2025 ರಲ್ಲಿ ನಡೆಯುವ ಆಸ್ಕರ್ ಅವಾರ್ಡ್ಸ್ ಗೆ ಭಾರತದಿಂದ ಹಿಂದಿ ಭಾಷಾ ಚಿತ್ರ” ಲಾಪತಾ ಲೇಡೀಸ್ ” ಆಯ್ಕೆಯಾಗಿದೆ ಎಂದು ಫಿಲಂ ಫೆಡರೇಷನ್ ಆಫ್ ಇಂಡಿಯಾ ಅಧಿಕೃತ ಘೋಷಣೆ ಮಾಡಿದೆ.
ಬಾಲಿವುಡ್ ಸಿನೆಮಾಗಳಾದ ಅನಿಮಲ್, ಮಲಯಾಳಂ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಆಟಂ, ಕೇನ್ಸ್ ಪ್ರಶಸ್ತಿ ಪಡೆದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಿತ್ರ ಸೇರಿದಂತೆ ಒಟ್ಟು 29 ಚಿತ್ರಗಳು ಸ್ಪರ್ಧೆಯಲ್ಲಿದ್ದವು, ಅವೆಲ್ಲವನ್ನು ಹಿಂದಿಕ್ಕಿ ” ಲಾಪತಾ ಲೇಡೀಸ್ ” ಆಯ್ಕೆಯಾಗಿದೆ.
ಕಿರಣ್ ರಾವ್ ನಿರ್ದೇಶಿಸಿರುವ ಈ ಚಿತ್ರವನ್ನು ಅಮಿರ್ ಖಾನ್ ನಿರ್ಮಿಸಿದ್ದು ಇದು 2001 ರ ಸಮಯದ ಪಿತೃ ಪ್ರಧಾನ ಸಮಾಜದ ಬಗೆಗಿನ ಕಥೆಯಾಗಿದೆ. ಈ ಚಿತ್ರದಲ್ಲಿ ಎರಡು ವಿವಾಹಿತ ಹೆಣ್ಣು ಮಕ್ಕಳು ರೈಲು ಪ್ರಯಾಣದಲ್ಲಿ ಆಡಲು ಬದಲು ಆದ ಕಥೆ ಈ ಚಿತ್ರದಲ್ಲಿ ವಿವರಿಸಲಾಗಿದೆ.
2025 ರಲ್ಲಿ ನಡೆಯುವ ಆಸ್ಕರ್ ಅವಾರ್ಡ್ಸ್ ಸಮಾರಂಭದಲ್ಲಿ ಈ ಚಿತ್ರ ಪ್ರಶಸ್ತಿ ಗಿಟ್ಟಿಸಬಹುದೇ ಕಾದು ನೋಡಬೇಕಿದೆ.
Leave feedback about this