ಬಾಳೆದಿಂಡಿನ ರಸದ ಬಳಕೆ ಬಹಳ ಹಳೆಯ ಪರಂಪರೆಯ ಮಾರ್ಗದರ್ಶನದಿಂದ ನಡೆದು ಬಂದಿದೆ. ಹಳ್ಳಿಗಳಲ್ಲಿ ವಾಸಿಸುವ ಪ್ರತಿಯೊಂದು ಮನೆಗಳಲ್ಲಿಯೂ ಸುಲಭವಾಗಿ ದೊರೆಯುವ ಅತೀ ಅಮೂಲ್ಯವಾದ ಔಷದಿಯ ಆಗರ ಇದು.
ಬಾಳೆಯ ಗಿಡವೇ ಒಂದು ಔಷದ. ಬಾಳೆ ಹಣ್ಣು, ಬಾಳೆ ಹೂವು, ಬಾಳೆ ದಿಂಡು, ಬಾಳೆ ಎಲೆ, ಬಾಳೆ ಕಾಂಡ ಹೀಗೆ ಪ್ರತಿಯೊಂದು ಬಾಗವು ಒಂದು ಅದ್ಬುತ ಔಷದಿಯ ಆಗರ. ಹಳ್ಳಿಗಳಲ್ಲಿ ಬೆಳ್ಳಂಬೆಳಿಗ್ಗೆ ಎದ್ದು ಬಾಳೆಗಿಡದ ಬುಡವನ್ನು ಕತ್ತರಿಸಿ ಅಲ್ಲೇ ಉತ್ಪತ್ತಿಯಾಗುವ ರಸವನ್ನು ಪಡೆಯುದು ಒಂದು ಪರಂಪರೆ. ಹೀಗೆ ನೈಸರ್ಗಿಕವಾಗಿ ಪಡೆದ ರಸವನ್ನು ಹೀರುವುದರಿಂದ ಸಿಗುವ ಲಾಭಗಳು ಮಾರುಕಟ್ಟೆಯಲ್ಲಿ ಕಡೆದು ತಂದು ರಾಶಿ ಹಾಕಿದ ದಿಂಡಿನಿಂದ ಸಿಗುವ ಲಾಭಗಳಿಗಿಂತ ನೂರು ಪಟ್ಟು ಹೆಚ್ಚು.
ನೀವು ಗಮನಿಸಿದ್ದೆ ಆದರೆ, ಬಾಳೆ ದಿಂಡಿನ ರಸವನ್ನು ತಯಾರಿಸಿ ಹಾಗೆ ಬಿಟ್ಟರೆ ಅದು ಗಾಢ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ದಿಂಡಿನ ರಸದಲ್ಲಿ ಸಿಗುವ ಬಹಳಷ್ಟು ಆರೋಗ್ಯಕಾರಿ ಗುಣಗಳು ಕಡಿಮೆಯಾಗುತ್ತವೆ. ಹಾಗಾಗಿ ಬಾಳೆ ದಿಂಡಿನ ರಸವನ್ನು ನೇರವಾಗಿ ಕೃಷಿ ತೋಟದಿಂದ ನೈಸರ್ಗಿಕ ಹಾಗು ಹಳೆಯ ಪದ್ದತಿಯಂತೆ ಸಂಸ್ಕರಿಸಿ ಉಪಯೋಗಿಸಿದರೆ ಹೆಚ್ಚು ಆರೋಗ್ಯಕಾರಿ.
ಬಾಳೆದಿಂಡಿನ ನೀರನ್ನು ಸಂಸ್ಕರಿಸುವ ವಿಧಾನ:
ಬಾಳೆ ಕಾಂಡವನ್ನು ಸಂಜೆಯ ಹೊತ್ತಿಗೆ ಕತ್ತರಿಸಿ ನೆಲದಲ್ಲಿ ಉಳಿದ ಕಾಂಡದಲ್ಲಿ ಒಂದು ಪೊಟರೆಯನ್ನು ಉಂಟು ಮಾಡಿ ಅದರ ಮೇಲೆ ಒಂದು ಬಿಳಿ ಬಣ್ಣದ ಶುಭ್ರವಾದ ಬಟ್ಟೆಯನ್ನು ಸುತ್ತಿ, ಯಾವುದೇ ಕ್ರಿಮಿ ಕೀಟ ಒಳ ನುಗ್ಗದಂತೆ ಎಚ್ಚರವಹಿಸಿ, ಮರುದಿನ ಮುಂಜಾನೆ ಎದ್ದು ಕಾಂಡದಲ್ಲಿ ನೈಸರ್ಗಿಕವಾಗಿ ಶೇಖರಣೆಯಾದ ರಸವನ್ನು ಕುಡಿಯುವುದರಿಂದ ಸಿಗುವ ಲಾಭಗಳು ಅತೀ ಹೆಚ್ಚು.
ಮೂತ್ರಪಿಂಡದ ಕಲ್ಲುಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ:
ಬಾಳೆಗಿಡದ ಕಾಂಡದಿಂದ ಉತ್ಪತ್ತಿಯಾದ ನೀರು ಮೂತ್ರಪಿಂಡದ ಕಲ್ಲುಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಹಳೆಯ ಕಾಲದಿಂದ ಇದೆ. ಮೂತ್ರವರ್ಜಕ ಪರಿಣಾಮ ಬಾಳೆಗಿಡದ ಬೇರುನೀರು ನೈಸರ್ಗಿಕ ಮೂತ್ರವರ್ಜಕವಾಗಿದ್ದು, ದೇಹದಲ್ಲಿ ಹೆಚ್ಚು ಮೂತ್ರ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚಿಕ್ಕ ಮೂಲವ್ಯಾಧಿಗಳನ್ನು ಹೊರಹಾಕಲು ಅಥವಾ ನೂತನ ಕಲ್ಲುಗಳ ಉಂಟಾಗುವಿಕೆಯನ್ನು ತಡೆಯಲು ಸಹಾಯಕವಾಗುತ್ತದೆ.
ಪೊಟಾಷಿಯಂ ನಲ್ಲಿ ಸಮೃದ್ಧ: ಬೇರುನೀರು ಪೊಟಾಷಿಯಂ ಅಂಶದಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಯ್ದುಕೊಳ್ಳಲು ಅಗತ್ಯವಾಗಿದೆ. ಪೊಟಾಷಿಯಂ, ಆಕ್ಸಲೇಟ್ನೊಂದಿಗೆ ಕ್ಯಾಲ್ಸಿಯಂ ಆವರಿಸಲು ತಡೆಯುವುದರಿಂದ ಕಲ್ಲುಗಳ ರೂಪಗೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
ಕ್ಷಾರೀಯ ಗುಣಗಳು (Alkaline Properties): ಬಾಳೆಗಿಡದ ಬೇರುನೀರಿಗೆ ಕ್ಷಾರೀಯ ಗುಣಗಳು ಇರುತ್ತವೆ, ಇದು ಮೂತ್ರದ ಆಮ್ಲೀಯ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಆಮ್ಲೀಯ ಮೂತ್ರವು ಕಲ್ಲುಗಳನ್ನು ಉಂಟುಮಾಡುತ್ತವೆ. ಹೀಗೆ ಉಂಟು ಮಾಡಿದ ಕಲ್ಲುಗಳನ್ನು ನಿದಾನಕ್ಕೆ ದ್ರವ ರೂಪಕ್ಕೆ ತಿರುಗಿಸಿ ಹೆಚ್ಚಿನ ಮೊತ್ತದಲ್ಲಿ ಹೊರಬರುವ ಮೂತ್ರದಿಂದ ಈ ಕಲ್ಲುಗಳು ಮೂತ್ರಪಿಂಡದಿಂದ ಹೊರಬರಲು ಈ ದಿಂಡಿನ ನೀರು ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ನೂತನ ಕಲ್ಲುಗಳ ಉಂಟಾಗುವಿಕೆಯನ್ನು ತಡೆಯಬಹುದು.
ಕಾಯದ ಶಮನ (Soothing Inflammation): ಈ ನೀರು ಮೂತ್ರ ವಿಸರ್ಜನೆಯ ಪಥದಲ್ಲಿಉಂಟಾಗುವ ಉರಿಯುವಿಕೆಯನ್ನು ಶಮನಗೊಳಿಸುತ್ತದೆ, ಇದರಿಂದ ಕಲ್ಲುಗಳು ಕಡಿಮೆ ನೋವಿನ ಮೂಲಕ ಹೊರಹೋಗಲು ಸಹಾಯವಾಗುತ್ತದೆ.
ಪೊಟಾಷಿಯಂ: ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು, ಹಾಗೂ ಹೃದಯದ ಆರೋಗ್ಯವನ್ನು ಉತ್ತಮವಾಗಿಡಲು ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸಲು ಅಗತ್ಯವಾಗಿದೆ.
ನಾರಿನಾಂಶ: ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ B6 ಮೆದುಳಿನ ಆರೋಗ್ಯ, ಮೆಟಾಬೊಲಿಸಂ, ಹೆಚ್ಚಿಸಲು ಹಾಗೂ ವಿಟಮಿನ್ C ಆಂಟಿಆಕ್ಸಿಡೆಂಟ್ ಆಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚರ್ಮದ ಆರೋಗ್ಯ ಮತ್ತು ಚರ್ಮದ ಕೋಶಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮ್ಯಾಗ್ನೀಶಿಯಂ: ಸ್ನಾಯು ಮತ್ತು ನರಗಳ ಕಾರ್ಯ,, ಎಲುಬುಗಳ ಆರೋಗ್ಯ ಮತ್ತು ಶಕ್ತಿಯ ಉತ್ಪಾದನೆಗೆ ಮುಖ್ಯವಾಗಿದೆ.
ಕಬ್ಬಿಣ: ರಕ್ತದಲ್ಲಿ ಅಗತ್ಯವಿರುವ ಹೀಮೊಗ್ಲೋಬಿನ್ ಉತ್ಪಾದನೆಗೆ, ಇದು ಆಮ್ಲಜನಕವನ್ನು ರಕ್ತದ ಮೂಲಕ ಹೊತ್ತೊಯ್ಯಲು ಸಹಕಾರಿಯಾಗಿದೆ.
ಕ್ಯಾಲ್ಸಿಯಂ: ಬಾಳೆದಿಂಡಿನಲ್ಲಿ ದೊರೆಯುವ ಹೇರಳವಾದ ಕ್ಯಾಲ್ಸಿಯಂ ಗಟ್ಟಿಯಾದ ಎಲುಬುಗಳು ಮತ್ತು ಹಲ್ಲುಗಳಿಗಾಗಿ, ಮತ್ತು ಸ್ನಾಯುಗಳ ಕಾರ್ಯಕ್ಕಾಗಿ ಅಗತ್ಯವಾಗಿದೆ.