wowstava Blog HEALTH 4 U HOME REMEDY ಆಯುರ್ವೇದದ ಮಗು – ಏಕಾಗೃತೆ ಹಾಗು ಸ್ಮರಣ ಶಕ್ತಿ
HEALTH 4 U HOME REMEDY

ಆಯುರ್ವೇದದ ಮಗು – ಏಕಾಗೃತೆ ಹಾಗು ಸ್ಮರಣ ಶಕ್ತಿ

ಬ್ರಾಹ್ಮೀ ಅನ್ನೂ ಈ ಹೆಸರು ಬ್ರಹ್ಮ ದೇವರಿಂದ ಬಂದಿರಬಹುದು ಅನ್ನೋ ಊಹೆ ಇದೆ.

ಬ್ರಾಹ್ಮೀ ಎಲೆ, ಒಂದೆಲಗ, ಸರಸ್ವತಿ ಬಳ್ಳಿ ಹಾಗೂ ಆಂಗ್ಲ ಬಾಷೆಯಲ್ಲಿ ಇದನ್ನು ಬ್ರೈನ್ ಟೊ, ಆಯುರ್ವೇದದಲ್ಲಿ ಬಾಕೋಪಾ ಮೊನ್ನೇರಾ (bacopa monnieri) ಎಂದು ಕರೆಯಲಾಗುತ್ತದೆ. ಈ ಬ್ರಾಹ್ಮೀ ಬಳ್ಳಿಯು ಅತೀ ನೀರಿನಂಶ ಇರುವ ಜಾಗದಲ್ಲಿ ಹರಡಿಕೊಂಡು ಬೆಳೆಯುತ್ತದೆ. ಇದು ಅತೀ ಹೆಚ್ಚಾಗಿ ಭಾರತದಲ್ಲೇ ಕಾಣ ಸಿಗುತ್ತದೆ.  ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಬಹುಕಾಲದಿಂದಲೂ ಉಪಯೋಗಿಸಲ್ಪಟ್ಟ ಔಷಧವಾಗಿದೆ. ಈ ಬಳ್ಳಿ ಸಹಜವಾಗಿ ಗದ್ದೆಬದಿಗಳಲ್ಲಿ ಕಾಣಸಿಗುತ್ತದೆ ಹಾಗೂ ಪ್ರತೀ ಬಳ್ಳಿಗೂ ಒಂದೇ ಎಲೆ ಇರುವ ಕಾರಣ ಇದನ್ನು ಒಂದೆಲಗ ಎಂದು ಕರೆಯಲಾಗುತ್ತದೆ.

ಮೊದ ಮೊದಲು ಹಳ್ಳಿಗಳಲ್ಲಷ್ಟೇ ಕಾಣಸಿಗುವ ಈ ಬಳ್ಳಿ ಇತ್ತೀಚಿಗೆ ಪೇಟೆಗಳಲ್ಲೂ ಹೈಬ್ರಿಡ್ ವರ್ಗದ ಬ್ರಾಹ್ಮೀ ಎಲೆಗಳೂ ಕಾಣ ಸಿಗುತ್ತವೆ. ಇದು ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಸ್ಮರಣ ಶಕ್ತಿಯನ್ನು ವೃದ್ಧಿಸಲು ಸಹಾಯಕಾರಿಯಲ್ಲದೆ ಕೆಲವು ಮಂದ ಬುದ್ದಿಯ ಮಕ್ಕಳಿಗೂ ಔಷಧಿಯಾಗಿ ಕೆಲಸ ಮಾಡುತ್ತದೆ. ಅದಲ್ಲದೆ ಮಾನಸಿಕ ಒತ್ತಡದಿಂದ ಬಳಲುವವರು ಇದನ್ನು ಅವಿಷಾದಿಯಾಗಿ ಸೇವಿಸಬಹುದು.

ಬ್ರಾಹ್ಮಿ (ಬಾಕೋಪಾ ಮೊನ್ನೇರಾ) ಎಲೆಗಳ ಲಾಭಗಳು:

ಸ್ಮರಣೆ ಮತ್ತು ಏಕಾಗ್ರತೆ:

ಬ್ರಾಹ್ಮಿ ಎಲೆಗಳು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ, ಸ್ಮರಣೆ ಮತ್ತು ಏಕಾಗ್ರತೆಯನ್ನು ಉತ್ತಮಗೊಳಿಸುತ್ತವೆ. ಈ ಎಲೆಗಳು ನಿಮ್ಮ ಪಾಟ್ ನಲ್ಲಿ ಅಥವಾ ತೋಟಗಳಲ್ಲಿ ಲಭ್ಯವಿದ್ದರೆ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದೊಂದೇ ಎಲೆಗಳನ್ನು ಅಗೆದು ತಿನ್ನುವುದರಿಂದ ಲಾಭ ಹೆಚ್ಚು ಹಾಗೂ ಪರಿಣಾಮಕಾರಿ.

ಚಿಂತೆ ಮತ್ತು ಒತ್ತಡ:

ಬ್ರಾಹ್ಮಿ ಎಲೆಗಳು ಚಿಂತೆ ನಿವಾರಕ ಗುಣಗಳನ್ನು ಹೊಂದಿವೆ, ಅವು ಮಾನಸಿಕ ಶಾಂತಿಯನ್ನು ಉತ್ತೇಜಿಸುತ್ತವೆ. ಬ್ರಾಹ್ಮೀ ಎಲೆಗಳು ಮುಖ್ಯವಾಗಿ ಮೆದುಳಿನ ನರಗಳ ಮೇಲೆ ಹೆಚ್ಚು ಕಾರ್ಯ ನಿರ್ವಹಿಸುವದರಿಂದ ಮಾನಸಿಕ ಒತ್ತಡ ಹಾಗೂ ಚಿಂತೆಗೊಳಗಾದ ರೋಗಿಗೆ ಬಹಳ ಉಪಕಾರಿ ಬ್ರಾಹ್ಮಿ ಎಲೆಗಳು ದೀರ್ಘಕಾಲಿಕ ಒತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿವೆ.

ಅಲ್ಜ್ಐಮೆರ್ ಸಮಸ್ಯಯಿಂದ ಬಳಲುವವರಿಗೆ:

ಅಲ್ಜ್ಐಮೆರ್ ಸಮಸ್ಯಯಿಂದ ಬಳಲುವವರು ವಯಸ್ಸಾಗುವ ಮೊದಲೇ ಅಥವಾ ಈ ಕಾಯಿಲೆಯ ಗುಣ ಲಕ್ಷಣಗಳು ಕಂಡು ಬಂದ ಕೂಡಲೇ ಬ್ರಾಹ್ಮೀ ಎಲೆಗಳನ್ನು ಸೇವಿಸುವುದರಿಂದ ಮುಂಬರುವ ಅಪಾಯಗಳನ್ನು ಬಹಳ ಮಟ್ಟಿಗೆ ತಡೆಯಬಹುದು ಬ್ರಾಹ್ಮಿ ಎಲೆಗಳನ್ನು ಸಾಮಾನ್ಯವಾಗಿ ಆಯುರ್ವೇದದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಚಿಕಿತ್ಸೆಗೆ ಬಳಸಲಾಗುತ್ತದೆ.

ಚರ್ಮದ ಆರೋಗ್ಯ:

ಬ್ರಾಹ್ಮಿ ಎಲೆಗಳು ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತವೆ, ವಿಶೇಷವಾಗಿ ಚರ್ಮದ ಸಮಸ್ಯೆಗಳನ್ನು ನಿವಾರಿಸಲು.

ಆಂಟಿಆಕ್ಸಿಡೆಂಟ್ಸ್:

ಬ್ರಾಹ್ಮಿ ಎಲೆಗಳಲ್ಲಿ ಆಂಟಿಆಕ್ಸಿಡೆಂಟ್ ಗುಣಗಳಿವೆ, ಇವು ದೇಹದ ಒಳಗಿನ ಹಾನಿಕರ ಅಂಶಗಳನ್ನು ಹತೋಟಿ ಮಾಡುತ್ತವೆ. ಬ್ರಾಹ್ಮಿ ಎಲೆಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೆಚ್ಚು ಇವೆ, ಇವು ದೇಹದ ಉಚಿತ ರ್ಯಾಡಿಕಲ್ಗಳನ್ನು ಹತೋಟಿ ಮಾಡುತ್ತವೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.

ಹಾರ್ಮೋನ್ಗಳ ಸಮತೋಲನ:

ಬ್ರಾಹ್ಮಿ ಎಲೆಗಳು ಹಾರ್ಮೋನ್ಗಳ ಸಮತೋಲನವನ್ನು ಕಾಪಾಡುವಲ್ಲಿ ಸಹಾಯಕವಾಗಿವೆ. ಬ್ರಾಹ್ಮಿ ಎಲೆಗಳು ಚಿಂತೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ. ಕಡಿಮೆ ಒತ್ತಡವು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಹೃದಯದ ಆರೋಗ್ಯ ಬ್ರಾಹ್ಮಿ:

ಬ್ರಾಹ್ಮಿ ಎಲೆಗಳು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತವೆ, ರಕ್ತದೊತ್ತಡ ಮತ್ತು ರಕ್ತಹೃತ್ಪಿಂಡಗಳ ಪಾರದರ್ಶಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಬ್ರಾಹ್ಮಿ ಎಲೆಗಳಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ರಕ್ತಸಂಚಾರವನ್ನು ಉತ್ತಮಗೊಳಿಸುತ್ತವೆ, ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಬ್ರಾಹ್ಮಿ ಎಲೆಗಳಲ್ಲಿ ಇರುವ ಪೋಷಕಾಂಶಗಳು ಹಾನಿಕರ LDL ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ, ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯಕ.

ಪಾಚಕ ಶಕ್ತಿ:

ಬ್ರಾಹ್ಮಿ ಎಲೆಗಳು ಪಾಚಕ ಶಕ್ತಿಯನ್ನು ಹೆಚ್ಚಿಸಲು  ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ.

ಬ್ರಾಹ್ಮೀ ಎಲೆ ಬಳಸುವ ಸುಲಭ ವಿಧಾನಗಳು:

ಬ್ರಾಹ್ಮಿ ಎಲೆಗಳು ನಿದ್ರೆಗೆ ಸಹಾಯ ಮಾಡುತ್ತವೆ, ಉತ್ತಮ ನಿದ್ರೆ ಗುಣಮಟ್ಟವನ್ನು ಸುಧಾರಿಸಲು ಸಹಾಯಕ. ನಿದ್ರಾಹೀನತೆಯಿಂದ ಬಳಲುವವರು ಬ್ರಾಹ್ಮೀ ಎಲೆಗಳನ್ನು ನಿಯಮಿತವಾಗಿ ಬಳಸುವುದರಿಂದ ನಿದ್ರಾಹೀನತೆಯಿಂದ ಪಾರಾಗಬಹುದು. ಬ್ರಾಹ್ಮೀ ಔಷಧಿಗಳು ಇತ್ತೀಚಿಗೆ ಎಲ್ಲಾ ಔಷಧೀಯ ಅಂಗಡಿಗಳಲ್ಲಿ ಲಭ್ಯವಿದೆ. ಆದರೂ ತಾಜಾ ಎಲೆಗಳು ಲಭ್ಯವಿದ್ದಲ್ಲಿ ಈ ಎಲೆಗಳನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಬಾಡಿದ ಮೇಲೆ ಒಂದು ಕಾವಲಿಯಲ್ಲಿ ಹಾಕಿ ಬಿಸಿ ಮಾಡಿ ಸ್ವಲ್ಪ ಬಾಡಿಸಬೇಕು. ಇದರಿಂದ ಇದರಲ್ಲಿರುವ ಅತ್ಯಧಿಕ ನೀರಿನ ಅಂಶ ಕಡಿಮೆಯಾಗಿ ಇದನ್ನು ಬಾಡಿಸಿದ್ದರಿಂದ ಕಲ್ಲಿನಲ್ಲಿ ಅಥವಾ ಮಿಕ್ಸರ್ ಜಾರಿನಲ್ಲಿ ಅರೆಯುವುದು ಸುಲಭ. ಇದಕ್ಕೆ ಸ್ವಲ್ಪ ಹಸಿ ಮೆಣಸು ಶುಂಠಿ ಹುಳಿ ಉಪ್ಪು ಹಾಗೂ ಸ್ವಲ್ಪ ಅಂದರೆ ಎರಡು ಚಮಚ ಅನ್ನವನ್ನು ಬೆರೆಸೆ ಕಡಿಯುದರಿಂದ ಈ ಎಲೆಗಳಲ್ಲಿ ಇರುವ ನಾರಿನಂಶವನ್ನು ಅಗೆದು ತಿನ್ನಲು ಬಹಳ ಸಹಾಯಕಾರಿ. ಇದನ್ನು ಚಟ್ನಿಯ ರೂಪದಲ್ಲಿ ಗಂಜಿಯ ಜೊತೆಗೆ ಸೇವಿಸುವುದರಿಂದ ಅಧಿಕ ಪ್ರಮಾಣದ ನಾರು ಪದಾರ್ಥ ನಿಮ್ಮ ದೇಹಕ್ಕೆ ಫಲಕಾರಿ. ಈ ಎಲೆಗಳನ್ನು ನಿಯಮಿತವಾಗಿ ಸೇವಿಸಿ ಅಂದರೆ ಸುಮಾರು ಒಂದು ತಿಂಗಳು ಸೇವಿಸಿ ನಂತರ ಇನ್ನೆರಡು ಅಥವಾ ಮೂರು ತಿಂಗಳು ಅಂತರ ಕಾಯ್ದುಕೊಳ್ಳುವುದು ಉತ್ತಮ.

ಬ್ರಾಹ್ಮಿ ಎಲೆಗಳ ಇತರ ರೂಪದ ಬಳಕೆ:

ಬ್ರಾಹ್ಮಿ ಚಹಾ ಅಥವಾ ಸೂಪ್ ರೂಪದಲ್ಲಿ ಬಳಸಬಹುದು.

ಪುಡಿಮಾಡಿ ನೀರಿನಲ್ಲಿ ಬೆರೆಸಿ ಸೇವಿಸಬಹುದು.

ಆಯುರ್ವೇದ ಔಷಧಿಗಳ ರೂಪದಲ್ಲಿ ಬಳಕೆ ಮಾಡಬಹುದು.

Exit mobile version