LATEST WITH HUB LOCAL NEWS

ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆಯ ಭೀಕರ ಹತ್ಯೆ; ಹತ್ಯೆಗೆ ಮುನ್ನ ನಡೆದಿದ್ದೇನು?

ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆಯ ಭೀಕರ ಹತ್ಯೆ; ಹತ್ಯೆಗೆ ಮುನ್ನ ನಡೆದಿದ್ದೇನು?

ಬೆಂಗಳೂರು (ಸೆ.23) : ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಭೀಕರ ಹತ್ಯೆಗೆ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಸಂಬಂಧ ಮೃತಳ ಸ್ನೇಹಿತನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಭೀಕರ ಕೊಲೆ; ಹತ್ಯೆಗೆ ಮುನ್ನ ನಡೆದಿದ್ದೇನು?

ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಭೀಕರ ಹತ್ಯೆಗೆ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಸಂಬಂಧ ಮೃತಳ ಸ್ನೇಹಿತನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಕೊಲೆಯಾದ ಮಹಾಲಕ್ಷ್ಮಿಯ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಆಕೆಯ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಹಂತಕನ ಸುಳಿವು ಪೊಲೀಸರಿಗೆ ಸಿಕ್ಕಿದೆ. ಈ ಹತ್ಯೆಯನ್ನು ಮೃತಳ ಆತ್ಮೀಯ ಸ್ನೇಹಿತನೇ ನಡೆಸಿರುವುದು ಖಚಿತವಾಗಿದ್ದು, ಸಂಶಯದ ಮೇರೆಗೆ ಆಕೆಯ ಆಪ್ತರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಫ್ರಿಡ್ಜ್ ನಲ್ಲಿ ಬಾಡಿ : ಸೂಟ್‌ಕೇಸ್‌ನಲ್ಲಿ ಹೆಣವನ್ನು ಹೊತ್ತೊಯ್ಯಲು ಹೊಂಚು ಹಾಕಿದ್ದ ಹಂತಕ!

ವೈಯಾಲಿಕಾವಲ್‌ನ ಕೊಲೆಯಾದ ಮಹಿಳೆ ಮಹಾಲಕ್ಷ್ಮೀ ಮರ್ಡರ್‌ ಕೇಸ್‌ನಲ್ಲಿ ಹೊಸ ಹೊಸ ಖುಲಾಸೆಗಳು ಹೊರಬೀಳುತ್ತಿವೆ. ಮಹಾಲಕ್ಮೀಯನ್ನು ಕೊಲೆ ಮಾಡಿ ಹಂತಕ ಆಕೆಯ ಡೆಡ್‌ ಬಾಡಿಯನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಲು ಪ್ರಯತ್ನ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಬೆಂಗಳೂರು (ಸೆ.22); ವೈಯಾಲಿಕಾವಲ್‌ನಲ್ಲಿ ನಡೆದ ಭೀಕರ ಕೊಲೆ ಘಟನೆಯಲ್ಲಿ 29 ವರ್ಷದ ಯುವತಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಬರೋಬ್ಬರಿ 59 ಪೀಸ್‌ಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿ ಇರಿಸಿದ ಘಟನೆಯಲ್ಲಿ ಒಂದೊಂದೇ ವಿಚಾರಗಳು ಹೊರಬರುತ್ತಿವೆ. ಮಹಾಲಕ್ಷ್ಮೀಯನ್ನು ಕೊಂದ ಬಳಿಕ ಆಕೆಯ ಮೃತದೇಹವನ್ನು ಹೊರಗೆ ಸಾಗಿಸುವ ಪ್ರಯತ್ನವನ್ನೂ ಮಾಡಿದ್ದು, ಕೊನೆಯ ಕ್ಷಣದಲ್ಲಿ ತನ್ನ ಯೋಚನೆಯನ್ನು ಬದಲಾಯಿಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಫ್ರಿಜ್‌ನ ಎದುರುಗಡೆ ಇರುವ ಸೂಟ್‌ಕೇಸ್‌. ಭಾನುವಾರ ಮಹಾಲಕ್ಮೀ ಕೊಲೆ ಕೇಸ್‌ನ ಪ್ರಮುಖ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಆಕೆಯ ತಾಯಿ ಮನೆಯ ಕೀ ತೆಗೆದು ಒಳಗೆ ಹೋಗುವ ವೇಳೆ ವಿಡಿಯೋ ಮಾಡಿದ್ದು ಈ ಸಂದರ್ಭದಲ್ಲಿ ಫ್ರಿಜ್‌ನ ಎದುರು ಖಾಲಿ ಸೂಟ್‌ಕೇಸ್‌ ಕಂಡು ಬಂದಿದೆ.

ಮಹಾಲಕ್ಷ್ಮಿಯ ದೇಹವನ್ನ ಸಣ್ಣ ಸಣ್ಣದಾಗಿ ಕತ್ತರಿಸಿ ಹೊರಗಡೆ ಸಾಗಿಸೋದು ಆರೋಪಿಯ ಯೋಚನೆ ಆಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಹಾಲಕ್ಷ್ಮಿ ತಾಯಿ ಮನೆಗೆ ಬಂದಾಗ ಮಾಡಿದ್ದ ವಿಡಿಯೋ ನೋಡಿದರೆ ಇಂಥ ಹಲವು ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ. ಫ್ರಿಡ್ಜ್ ಮುಂದೆಯೇ ಕೊಲೆಗಡುಕ ಸೂಟ್ ಕೇಸ್ ಇಟ್ಟಿದ್ದ ದೇಹ ತುಂಡಾಗಿಸಿ ಸೂಟ್ ಕೇಸ್ ನಲ್ಲಿ ಸಾಗಿಸೋದು ಹಂತಕನ ಪ್ಲಾನ್ ಆಗಿದ್ದಿರಬಹುದು ಎಂದು ಪೊಲೀಸರೂ ಅಂದಾಜು ಮಾಡಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಮ್ಮ ಪತಿಯಿಂದ ಸುಮಾರು ಒಂಬತ್ತು ತಿಂಗಳ ಹಿಂದೆಯೇ ಪ್ರತ್ಯೇಕವಾಗಿದ್ದ ಮಹಾಲಕ್ಷ್ಮೀ, ವೈಯಾಲಿಕಾವಲ್ ಹತ್ತಿರದ ಹೆಸರಾಂತ ಮಾರಾಟ ಮಳಿಗೆಯಲ್ಲಿ ಸೇಲ್ಸ್ ಗರ್ಲ್ಸ್‌ ಆಗಿ ಕೆಲಸ ಮಾಡುತ್ತಿದಳು. ಈ ವೇಳೆ ಆಕೆಗೆ ಇನ್ನೊಬ್ಬ ಯುವಕನ ಜತೆ ಸ್ನೇಹ ಬೆಳೆದಿತ್ತು. ಈ ಸ್ನೇಹದಲ್ಲಿ ಮೂಡಿದ ಮನಸ್ತಾಪವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ತನ್ನ ಪತಿಯಿಂದ ದೂರವಾಗಿದ್ದ ಕಾರಣಕ್ಕೆ ಮಹಾಲಕ್ಷ್ಮೀ ಜತೆ ಆಕೆಯ ಪೋಷಕರು ಸಹ ಮುನಿಸಿಕೊಂಡಿದ್ದರು. ಹೀಗಾಗಿ ವೈಯಾಲಿಕಾವಲ್‌ನಲ್ಲಿ ಆಕೆ ಏಕಾಂಗಿಯಾಗಿ ನೆಲೆಸಿದ್ದಳು. ತನ್ನ ಸಹೋದ್ಯೋಗಿಗಳ ಜತೆ ಖುಷಿಯಿಂದಲೇ ಇದ್ದ ಆಕೆ, ತನ್ನ ವೈಯಕ್ತಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ.

ಸೆ.12ರಂದು ಆಕೆಯ ಮೊಬೈಲ್ ಆಫ್ ಆಗಿದ್ದು, ಅಂದು ಆಕೆಯ ಮನೆಗೆ ಬಂದಿರುವ ಪರಿಚಿತ ವ್ಯಕ್ತಿಯಿಂದಲೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಸಾವಿಗೂ ಮುನ್ನ ಗಲಾಟೆ?

ಮಹಾಲಕ್ಷ್ಮೀ ಮನೆಗೆ ಹಂತಕ ಬಲವಂತವಾಗಿ ಪ್ರವೇಶ ಮಾಡಿಲ್ಲ. ಹತ್ಯೆಗೂ ಮುನ್ನ ತನ್ನ ಮೇಲೆ ಹಲ್ಲೆ ನಡೆಸಲು ಮುಂದಾದ ಆರೋಪಿಗೆ ಮಹಾಲಕ್ಷ್ಮೀ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಆತನ ಕೈ ಮೈ ಪರಚ, ಕಚ್ಚಿ ಆಕೆ ಗಲಾಟೆ ಮಾಡಿದ್ದಾಳೆ ಎಂಬುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಮಾಂಸ ಕತ್ತರಿಸುವ ಚಾಕುವನ್ನು ಬಳಸಲಾಗಿದೆ.

ತನಗೆ ತೀವ್ರ ಪ್ರತಿರೋಧಿಸಿದ್ದ ಮಹಾಲಕ್ಷ್ಮೀ ಮೇಲೆ ಸಿಟ್ಟಿಗೆದ್ದು ಚಾಕುವಿನಿಂದ ಇರಿದು ಬಳಿಕ ಮಾಂಸ ಕತ್ತರಿಸುವ ಚಾಕುವಿನಿಂದ ಆಕೆಯ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಆರೋಪಿ ಭೀಕರವಾಗಿ ಕೊಂದು ನಂತರ ಫ್ರಿಡ್ಜ್ ನ ಮೊರೆ ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X