LATEST WITH HUB STATE NEWS

ಮಂಗಳೂರಿನಲ್ಲಿ ಆಟೋ ಅಪಘಾತ: ಅತೀ ವೇಗವಾಗಿ ಬರುತ್ತಿದ್ದ ಆಟೋ  ಪಲ್ಟಿಯಾಗಿ ತಾಯಿಯ ಮೇಲೆ ಬಿದ್ದಾಗ, ಮಗಳು ಆಟೋ ಎತ್ತಿ ತಾಯಿಯನ್ನು ಉಳಿಸಿದ ಘಟನೆ ವೈರಲ್:

ಮಂಗಳೂರಿನಲ್ಲಿ ಆಟೋ ಅಪಘಾತ: ಅತೀ ವೇಗವಾಗಿ ಬರುತ್ತಿದ್ದ ಆಟೋ  ಪಲ್ಟಿಯಾಗಿ ತಾಯಿಯ ಮೇಲೆ ಬಿದ್ದಾಗ, ಮಗಳು ಆಟೋ ಎತ್ತಿ ತಾಯಿಯನ್ನು ಉಳಿಸಿದ ಘಟನೆ ವೈರಲ್:

ಮಂಗಳೂರು: ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ನಡೆದಿರುವ ಅಪಘಾತದಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ ತಾಯಿಯ ಮೇಲೆ ಮಗುಚಿದ ಆಟೋವನ್ನು ಎತ್ತಿ ಹಾಕಿ, ತಾಯಿಯನ್ನು ರಕ್ಷಿಸಿರುವ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಚೇತನಾ (35 ವರ್ಷ) ಎಂಬ ಮಹಿಳೆ ತನ್ನ ಮಗಳನ್ನು ಟ್ಯೂಶನ್ ಸೆಂಟರ್‌ನಲ್ಲಿ ಕರೆತರಲು ಬಂದಿದ್ದಾಗ. ಟ್ಯೂಶನ್ ಮುಗಿಸಿ ಮನೆಗೆ ಮರಳುವ ಮುನ್ನ, ರಸ್ತೆಯನ್ನು ದಾಟಲು ಮುಂದಾದಾಗ, ವೇಗವಾಗಿ ಬಂದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ, ಚೇತನಾ ಅವರ ಮೇಲೆ ಪಲ್ಟಿಯಾಗಿ ಬಿದ್ದಿದೆ. ಚೇತನಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಲಕಿಯ ಧೈರ್ಯ ಶ್ಲ್ಯಾಘನೀಯ :

ಈ ದೃಶ್ಯವನ್ನು ಕಂಡ ಚೇತನಾ ಅವರ ಮಗಳು, ತಕ್ಷಣ ಓಡಿಹೋಗಿ ತನ್ನ ತಾಯಿಯನ್ನು ರಕ್ಷಿಸಲು ಪ್ರಯತ್ನಿಸಿದ್ದು, ಆ ವೇಳೆ ರಭಸದಿಂದ ಬಿದ್ದ ಆಟೋವನ್ನು ಮೇಲಕ್ಕೆ ಎತ್ತಿದ್ದಾಳೆ. ಈ ಧೈರ್ಯಶಾಲಿ ಬಾಲಕಿಯ ಸಮಯ ಪ್ರಜ್ಞೆಯು ತಾಯಿಯನ್ನು ಗಂಭೀರ ಅಪಾಯದಿಂದ ರಕ್ಷಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ:

ಈ ದೃಶ್ಯಗಳು ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಬಾಲಕಿಯ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಶ್ಲಾಘಿಸುತ್ತಿದ್ದಾರೆ.

ಸ್ಥಳೀಯ ಜನರ ಪ್ರತಿಕ್ರಿಯೆ:

ಅಪಘಾತದ ತಕ್ಷಣ, ಸ್ಥಳೀಯರು ಕೂಡಲೇ ಸಹಾಯಕ್ಕೆ ಧಾವಿಸಿದ್ದು, ಗಾಯಗೊಂಡ ಚೇತನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಟೋ ಚಾಲಕ ಮತ್ತು ಪ್ರಯಾಣಿಕರು ಸಹ ಈ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಈ ಘಟನೆಯು ಮಂಗಳೂರಿನಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಬಾಲಕಿಯ ಧೈರ್ಯವು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಘಟನೆ ಪೋಷಕರಿಗೆ ಮತ್ತು ಮಕ್ಕಳಿಗೆ ಸಮಯ ಪ್ರಜ್ಞೆಯ ಮಹತ್ವವನ್ನು ನೆನಪಿಸುವಂತಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X