wowstava Blog LATEST WITH HUB STATE NEWS ಬೈಕ್ ಸರ್ವಿಸ್ ವಿಚಾರ – ಶೋರೂಂ ಗೆ ಬೆಂಕಿ ಇಟ್ಟ ಭೂಪ
LATEST WITH HUB STATE NEWS

ಬೈಕ್ ಸರ್ವಿಸ್ ವಿಚಾರ – ಶೋರೂಂ ಗೆ ಬೆಂಕಿ ಇಟ್ಟ ಭೂಪ

ಕಲಬುರಗಿ : ಬೈಕನ್ನು ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂಬ ಕಾರಣಕ್ಕೆ ಶೋ ರೂಂ ಗೆ ಬೆಂಕಿ ಇಟ್ಟ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ. ಇದನ್ನ ಮೊದಲು ಶಾರ್ಟ್ ಸರ್ಕ್ಯೂಟ್ ಎಂದು ಭಾವಿಸಿದ್ದರು ಆದರೆ ಪೊಲೀಸ್ ತನಿಖೆಯಿಂದ ಭೂಪನೊಬ್ಬ ಬೆಂಕಿ ಹಚ್ಚಿರುವ ವಿಷಯ ಬೆಳಕಿಗೆ ಬಂದಿದೆ.

ಘಟನೆಯ ವಿವರ : ಮೂರು ವಾರಗಳ ಹಿಂದೆ ಮೊಹಮ್ಮದ್ ನದೀಮ್ ಎಂಬಾತ ಕಲಬುರುಗಿಯ ಹಮನಾಬಾದ್ ಶೋ ರೂಂ ನಿಂದ ಹೊಸ ಬೈಕನ್ನು ಖರೀದಿ ಮಾಡಿದ್ದಾರೆ. ಅದು ಪದೇ ಪದೇ ರಿಪೇರಿಗೆ ಬರುವುದನ್ನು ನೋಡಿ ಶೋ ರೂಂ ವಿಷಯ ತಿಳಿಸಿ ಬೇಸರ ವ್ಯಕ್ತ ಪಡಿಸಿದ್ದಾರೆ ಆದರೆ ಶೋ ರೂಂ ಸಿಬ್ಬಂದಿಯಿಂದ ಯಾವುದೇ ಸ್ಪಂದನೆ ಸಿಗದ ಕಾರಣಕ್ಕೆ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ ನಂತರ ಪೆಟ್ರೋಲ್ ತಂದು ಶೋ ರೂಂ ಗೆ ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ.

ಇದರಿಂದ ಶೋ ರೂಂನಲ್ಲಿದ್ದ 6 ಹೊಸ ಬೈಕುಗಳು ಬೆಂಕಿಗಾಹುತಿಯಾಗಿವೆ ಹಾಗು ಅನೇಕ ಬೆಲೆ ಬಾಳುವ ವಸ್ತುಗಳು ಹಾನಿಗೀಡಾಗಿವೆ ಎಂದು ಹೇಳಲಾಗುತ್ತಿದೆ. ಪೊಲೀಸರು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಸನ್ನು ದಾಖಲಿಸಿ ಆರೋಪಿ ಮೊಹಮ್ಮದ್ ನದೀಮ್ ಅವರನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Exit mobile version